ಬಂಧನಕ್ಕೊಳಗಾಗಿರುವ ಗೌತಮ್ ನವ್ಲಾಖ, ಆನಂದ್ ತೇಲ್ತುಂಬ್ಡೆಗೆ ‘2020ನೆ ಶಕ್ತಿ ಭಟ್ ಪುಸ್ತಕ ಪ್ರಶಸ್ತಿ’

Update: 2020-07-16 13:59 GMT

 

ಹೊಸದಿಲ್ಲಿ: ಭೀಮಾ-ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ಹೋರಾಟಗಾರರಾದ ಗೌತಮ್ ನವ್ಲಾಖ ಮತ್ತು ಆನಂದ್ ತೇಲ್ತುಂಬ್ಡೆಯವರು 2020ನೆ ಶಕ್ತಿ ಭಟ್ ಪುಸ್ತಕ ಪ್ರಶಸ್ತಿಗೆ ಜಂಟಿಯಾಗಿ ಆಯ್ಕೆಯಾಗಿದ್ದಾರೆ.

ತೇಲ್ತುಂಬ್ಡೆಯವರು 'ರಿಪಬ್ಲಿಕ್ ಆಫ್ ಕಾಸ್ಟ್ ಆ್ಯಂಡ್ ರೇಡಿಕಲ್ ಇನ್ ಅಂಬೇಡ್ಕರ್ ಆ್ಯಂಡ್ ದಲಿತ್ಸ್; ಪಾಸ್ಟ್, ಪ್ರೆಸೆಂಟ್ ಆ್ಯಂಡ್ ಫ್ಯೂಚರ್' ಸೇರಿ 20ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ. ನವ್ಲಾಖ ಅವರು 'ಡೇಸ್ ಆ್ಯಂಡ್ ನೈಟ್ಸ್ ಇನ್ ದ ಹಾರ್ಟ್ ಲ್ಯಾಂಡ್ ಆಫ್ ರೆಬೆಲಿಯನ್ ' ಎನ್ನುವ ಪುಸ್ತಕವನ್ನು ಬರೆದಿದ್ದಾರೆ. 

ತೇಲ್ತುಂಬ್ಡೆ ಬದಲಾಗಿ ಅವರ ಪತ್ನಿ ರಮಾ ತೇಲ್ತುಂಬ್ಡೆ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ಶಕ್ತಿ ಭಟ್ ಫೌಂಡೇಶನ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News