​450 ವಿ.ವಿ.ಗಳು ಅಂತಿಮ ಪರೀಕ್ಷೆ ನಡೆಸಿವೆ ಅಥವಾ ನಡೆಸಲು ಯೋಜಿಸುತ್ತಿವೆ: ಯುಜಿಸಿ

Update: 2020-07-16 16:24 GMT

ಹೊಸದಿಲ್ಲಿ, ಜು. 16: ಸುಮಾರು 450ಕ್ಕೂ ಅಧಿಕ ವಿಶ್ವವಿದ್ಯಾನಿಲಯಗಳು ತಮ್ಮ ಅಂತಿಮ ಪರೀಕ್ಷೆಗಳನ್ನು ನಡೆಸಿವೆ ಅಥವಾ ಆನ್ಲೈನ್ ಅಥವಾ ಆಫ್ಲೈನ್ ವಿಧಾನದಲ್ಲಿ ನಡೆಸಲು ಯೋಜಿಸುತ್ತಿವೆ ಎಂದು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ (ಯುಜಿಸಿ) ಗುರುವಾರ ಹೇಳಿದೆ. 

ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಪರೀಕ್ಷೆ ನಡೆಸುವುದಕ್ಕೆ ಹಲವು ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗುತ್ತಿರುವ ನಡುವೆ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ (ಯುಜಿಸಿ) ಈ ಮಾಹಿತಿ ನೀಡಿದೆ. ಪರೀಕ್ಷೆ ನಡೆಸುವ ಬಗ್ಗೆ ಯಥಾಸ್ಥಿತಿ ವರದಿ ಸಲ್ಲಿಸುವಂತೆ ಎಲ್ಲ ವಿಶ್ವವಿದ್ಯಾನಿಲಯಗಳಿಗೆ ಯುಜಿಸಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ 120 ಸ್ವಾಯತ್ತ ವಿಶ್ವವಿದ್ಯಾನಿಲಯ, 229 ಖಾಸಗಿ ವಿಶ್ವವಿದ್ಯಾನಿಲಯ, 40 ಕೇಂದ್ರೀಯ ವಿಶ್ವವಿದ್ಯಾನಿಲಯ ಹಾಗೂ 251 ರಾಜ್ಯ ವಿಶ್ವವಿದ್ಯಾನಿಲಯಗಳು ಸೇರಿದಂತೆ 640 ವಿಶ್ವವಿದ್ಯಾನಿಲಯಗಳಿಂದ ಯುಜಿಸಿ ಪ್ರತಿಕ್ರಿಯೆ ಸ್ವೀಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News