3 ಪ್ರಕರಣಗಳಲ್ಲಿ ಅಖಿಲ್ ಗೊಗೊಯಿಗೆ ಗುವಾಹಟಿ ಹೈಕೋರ್ಟ್ ಜಾಮೀನು

Update: 2020-07-16 16:56 GMT

ಹೊಸದಿಲ್ಲಿ: ಸಿಎಎ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿ ದೇಶದ್ರೋಹ ಪ್ರಕರಣದಡಿ ಬಂಧಿಸಲ್ಪಟ್ಟಿದ್ದ, ಈಗ ಕೊರೋನ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಹೋರಾಟಗಾರ ಅಖಿಲ್ ಗೊಗೊಯಿಯವರಿಗೆ ಗುವಾಹಟಿ ಹೈಕೋರ್ಟ್ 3 ಪ್ರಕರಣಗಳಲ್ಲಿ ಜಾಮೀನು ನೀಡಿದೆ.

“3 ಪ್ರಕರಣಗಳಲ್ಲಿ ಅಖಿಲ್ ಗೊಗೊಯಿಗೆ ಜಾಮೀನು ನೀಡಲಾಗಿದೆ. ಇನ್ನು ಎನ್ ಐಎಯ 2 ಪ್ರಕರಣಗಳು ಮಾತ್ರ ಬಾಕಿಯಿವೆ” ಗೊಗೊಯಿಯವರ ವಕೀಲರು ಮಾಹಿತಿ ನೀಡಿದ್ದಾರೆ.

ಜುಲೈ 11ರಂದು ಗೊಗೊಯಿ ಕೊರೋನ ಸೋಂಕಿಗೊಳಗಾಗಿರುವುದು ದೃಢಪಟ್ಟಿತ್ತು ಮತ್ತು ನಂತರ ಅವರನ್ನು ಗುವಾಹಟಿ ಮೆಡಿಕಲ್  ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News