×
Ad

ಬಾಟಲಿಯಲ್ಲಿದ್ದ ನೀರಿಗಾಗಿ ಮೊರೆಯಿಟ್ಟ ಅಳಿಲು: ಮನಕಲಕುವ ವಿಡಿಯೋ ವೈರಲ್

Update: 2020-07-17 18:18 IST

ಹೊಸದಿಲ್ಲಿ: ಬಾಯಾರಿದ ಅಳಿಲೊಂದು ನೀರಿಗೆ ಮೊರೆಯಿಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಅಳಿಲು ತನ್ನ ಹಿಂಬದಿಯ ಕಾಲುಗಳಲ್ಲಿ ನಿಂತುಕೊಂಡು ಒಬ್ಬ ವ್ಯಕ್ತಿಯ ಬಳಿ ‘ನೀರು' ಕೊಡುವಂತೆ ಮೊರೆಯಿಡುತ್ತಿರುವ ರೀತಿಯಲ್ಲಿ ಆತನನ್ನು ಸುತ್ತುತ್ತಿರುವುದು ಕಾಣಿಸುತ್ತದೆ.

ಈ ವೀಡಿಯೋ ರೆಡ್ಡಿಟ್‍ ನಲ್ಲಿ  ಮೊದಲು ಕಾಣಿಸಿಕೊಂಡಿತ್ತು. ನಂತರ ಇತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅಳಿಲಿನ ಅಳಲನ್ನು ಕಂಡು ಎಲ್ಲರ ಮನ ಕರಗಿದೆ.

ಒಬ್ಬ ವ್ಯಕ್ತಿ ಹಾಗೂ ಹುಡುಗಿ ಅಳಿಲನ್ನು ನೋಡುತ್ತಿರುವಂತೆಯೇ ಅದು ರಸ್ತೆಯಲ್ಲಿ ಹೋಗುತ್ತಿರುತ್ತದೆ. ಆ ವ್ಯಕ್ತಿಯ ಕೈಯ್ಯಲ್ಲಿ ನೀರಿನ  ಬಾಟಲಿ ಕಾಣುತ್ತಿದ್ದಂತೆಯೇ ಅದನ್ನು ನೀಡುವಂತೆ ಅಳಿಲು ಮೊರೆಯಿಡುವಂತೆ ಎರಡು ಕಾಲುಗಳಲ್ಲಿ ನಿಂತುಕೊಳ್ಳುತ್ತದೆ. ಕೊನೆಗೆ ಆ ವ್ಯಕ್ತಿ ಬಗ್ಗಿ ಬಾಟಲಿ ನೀಡುತ್ತಿದ್ದಂತೆಯೇ ಅದು ಬಾಟಲಿಯಿಂದ ನೀರು ಹೀರಲು ಆರಂಭಿಸಿ ಕೊನೆಗೆ ಬಾಟಲಿಯಲ್ಲಿನ ನೀರೆಲ್ಲಾ ಖಾಲಿಯಾಗುತ್ತದೆ.

ಇಲ್ಲಿಯ ತನಕ ಈ ವೀಡಿಯೋವನ್ನು 4.2 ಲಕ್ಷ ಮಂದಿ ವೀಕ್ಷಿಸಿದ್ದಾರೆ ಹಾಗೂ ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ಮೊದಲು ವೀಡಿಯೋ ಕಾಣಿಸಿಕೊಂಡ ರೆಡ್ಟಿಟ್‍ ನಲ್ಲಿ ಈ ವೀಡಿಯೋವನ್ನು 30 ಲಕ್ಷ ಜನರು ವೀಕ್ಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News