ದ್ವಿತೀಯ ಪಿಯು ಪರೀಕ್ಷೆ: ಪಡುಬಿದ್ರಿ ಕಾಲೇಜಿಗೆ ಶೇ.89 ಫಲಿತಾಂಶ

Update: 2020-07-18 13:41 GMT
ನಸೀಬಾ ನುಸ್ರ, ಅಭಿನಯ, ಅಶ್ವಿನಿ

ಪಡುಬಿದ್ರಿ: ದ್ವಿತೀಯ ಪಿಯು ಪರೀಕ್ಷೆ ಬರೆದ 35 ವಿದ್ಯಾರ್ಥಿಗಳಲ್ಲಿ 31 ಮಂದಿ ಉತ್ತೀರ್ಣರಾಗುವ ಮೂಲಕ ಪಡುಬಿದ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ.89 ಫಲಿತಾಂಶ ದಾಖಲಿಸಿದೆ. 

ಕಲಾ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.100 ಫಲಿತಾಂಶಕ್ಕೆ ಕಾರಣರಾಗಿದ್ದಾರೆ. 3 ಮಂದಿ ವಿಶಿಷ್ಟ, 16 ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ವಾಣಿಜ್ಯ ವಿಭಾಗದಲ್ಲಿ  ನಸೀಬಾ ನುಸ್ರ (554), ಅಭಿನಯ (546), ಕಲಾ ವಿಭಾಗದಲ್ಲಿ ಅಶ್ವಿನಿ(510) ಅಂಕ ದಾಖಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News