ಪುತ್ತೂರು- ಕಡಬ ತಾಲೂಕಿನಲ್ಲಿ ಮತ್ತೆ 9 ಕೊರೋನ ಪಾಸಿಟಿವ್ ಪ್ರಕರಣ ಪತ್ತೆ

Update: 2020-07-22 06:55 GMT

ಪುತ್ತೂರು, ಜು.22: ನಗರ ಪೊಲೀಸ್ ‌ಠಾಣೆಯ 33 ವರ್ಷ ವಯಸ್ಸಿನ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಬುಧವಾರ 9 ಕೊರೋನ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.

ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಬನ್ನೂರು ನಿವಾಸಿ 75 ವರ್ಷ ಪ್ರಾಯದ ಪುರುಷ, ನಗರದ ಕೋರ್ಟು ರಸ್ತೆ ನಿವಾಸಿಗಳಾದ 62 ವರ್ಷ ವಯಸ್ಸಿನ ಪುರುಷ, 53 ವರ್ಷದ ಅವರ ಪತ್ನಿ, ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿರುವ ಅರಿಯಡ್ಕ ನಿವಾಸಿ 58 ವರ್ಷ ವಯಸ್ಸಿನ ಮಹಿಳೆ, ನಗರದ ಸಾಮೆತ್ತಡ್ಕ ನಿವಾಸಿ 37 ವರ್ಷದ ಪುರುಷ, ಬೆಳ್ಳಿಪ್ಪಾಡಿ ಗ್ರಾಮದ ಗಾಣದಕೊಟ್ಯ ಎಂಬಲ್ಲಿನ ನಿವಾಸಿ 21 ವರ್ಷ ವಯಸ್ಸಿನ ಮಹಿಳೆಯಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟಿದೆ.

ಕಡಬ ತಾಲೂಕಿನಲ್ಲಿ: 

ಕೇರಳದಿಂದ ಆಗಮಿಸಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಡಬ ತಾಲೂಕಿನ ‌ಸುಂಕದಕಟ್ಟೆ ನಿವಾಸಿ 53 ವರ್ಷ ವಯಸ್ಸಿನ ಪುರುಷರೊಬ್ಬರಲ್ಲಿ ಕೊರೋನ ಪಾಸಿಟಿವ್‌ ದೃಢಪಟ್ಟಿದೆ.

ಈ 9 ಪ್ರಕರಣಗಳ ಸೇರಿದಂತೆ ಪುತ್ತೂರು ಮತ್ತು ‌ಕಡಬ ತಾಲೂಕಿನಲ್ಲಿ ಈ ತನಕ ‌ಒಟ್ಟು120  ಕೊರೋನ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News