ಸೀಲ್‌ಡೌನ್ ಆಗಿರುವ ಪರ್ಕಳ ಮಾರುಕಟ್ಟೆ ಪುನಾರಂಭಕ್ಕೆ ಆಗ್ರಹ

Update: 2020-07-22 17:11 GMT

ಪರ್ಕಳ, ಜು.22: ಪರ್ಕಳ ಮೀನು ಮಾರುಕಟ್ಟೆಯ ಹಿಂಬದಿಯ ಕೋಳಿ ಅಂಗಡಿಯ ವ್ಯಕ್ತಿಗೆ 10 ದಿನಗಳ ಹಿಂದೆ ಕೊರೋನ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿರುವ ಮಾರುಕಟ್ಟೆ ಹಾಗೂ ವಾರದ ಸಂತೆಯನ್ನು ಕೂಡಲೇ ಪುನಾರಂಭಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಕೋಳಿ ಅಂಗಡಿ ಸೀಲ್‌ಡೌನ್ ಜೊತೆಗೆ ದಿನವಹಿ ಮೀನು ಮಾರುಕಟ್ಟೆ ಹಾಗೂ ವಾರದ ಸಂತೆಯನ್ನು ಕೂಡ ಬಂದ್ ಮಾಡಲಾಗಿತ್ತು. ಇದೀಗ ಹತ್ತು ದಿನ ಕಳೆದರೂ ನಗರಸಭೆಯ ವ್ಯಾಪ್ತಿಗೆ ಬರುವ ಕೋಳಿಯಂಗಡಿ, ಮಾರುಕಟ್ಟೆ ಸುತ್ತಮುತ್ತ ಆವರಣವನ್ನು ಈವರೆಗೆ ಸ್ಯಾನೆಟೈಸ್ ಮಾಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಈ ಕುರಿತು ಸ್ಯಾನಿಟೈಸ್ ಮಾಡುವಂತೆ ಒತ್ತಾಯಪಡಿಸುತ್ತಿದ್ದರೂ ಈವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಸಂತೆಯೊಳಗೆ ಮೂಕಪ್ರಾಣಿಗಳು ಉಳಿದುಕೊಂಡಿದ್ದು, ಇವುಗಳಿಗೂ ವೈರಸ್ ಹರಡಬಹುದು. ಆದುದರಿಂದ ಮಾರುಕಟ್ಟೆಯನ್ನು ಕೂಡಲೇ ಸ್ವಚ್ಛಗೊಳಿಸಿ, ಮೀನು ಮಾರುಕಟ್ಟೆ ಹಾಗೂ ಶುಕ್ರವಾರದ ಸಂತೆ ಪುನಾರಂಭಿಸಬೇಕು ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತಗಳರಾದ ಗಣೇಶ ರಾಜ್ ಸರಳೇಬೆಟ್ಟು, ಹಾಗೂ ರಾಜೀಶ್ ಪ್ರಭು ಪರ್ಕಳ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News