ಪುತ್ತೂರು, ಕಡಬ ತಾಲೂಕುಗಳಲ್ಲಿ ಒಟ್ಟು 10 ಕೊರೋನ ಪ್ರಕರಣಗಳು ಪಾಸಿಟಿವ್

Update: 2020-07-23 07:17 GMT

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಗುರುವಾರ 10 ಕೊರೋನ ಪ್ರಕರಣಗಳು ದೃಢಪಟ್ಟಿವೆ. ಪುತ್ತೂರು ನಗರ ಪೊಲೀಸ್ ಠಾಣೆಯ 38 ವರ್ಷ ವಯಸ್ಸಿನ ಪೊಲೀಸ್ ಸಿಬ್ಬಂದಿ, ಇವರ ತಾಯಿ 59 ವರ್ಷ ವಯಸ್ಸಿನ ಮಹಿಳೆಯಲ್ಲಿ ಕೊರೋನ ದೃಢಪಟ್ಟಿದೆ. 

ಮಂಗಳೂರು ಆಸ್ಪತ್ರೆಗೆ ದಾಖಲಾಗಿರುವ ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರಿನ 26 ವರ್ಷದ ಯುವಕ, ವೆನ್‍ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊಳ್ತಿಗೆ ಗ್ರಾಮದ 27 ವರ್ಷದ ಯುವಕ, ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಕಬಕದ 60 ವರ್ಷದ ವ್ಯಕ್ತಿಗೆ ಕೊರೋನ ದೃಢ ಪಟ್ಟಿದೆ. 

ಕಡಬ ತಾಲೂಕಿನ ಕುಟ್ರುಪ್ಪಾಡಿಯ 80 ವರ್ಷದ ಮಹಿಳೆ, 43 ವರ್ಷದ ಆಕೆಯ ಪುತ್ರ, ವೆನ್‍ಲಾಕ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಣಿಯೂರು ಗ್ರಾಮದ 48 ವರ್ಷದ ಗಂಡಸು, ಕುದ್ಮಾರು ಗ್ರಾಮದ 33 ವರ್ಷದ ಮಹಿಳೆ, 36 ವರ್ಷ ಪ್ರಾಯದ ಯುವಕನಲ್ಲಿ ಕೊರೋನ ದೃಢಪಟ್ಟಿದೆ. 

ಈ ತನಕ ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಒಟ್ಟು 130 ಕೊರೋನ ಪಾಸಿಟಿವ್ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News