ಪುತ್ರಿಯ ಆನ್ ಲೈನ್ ಶಿಕ್ಷಣಕ್ಕೆ ಹಸು ಮಾರಿ ಸ್ಮಾರ್ಟ್ ಫೋನ್ ಖರೀದಿಸಿದ ವ್ಯಕ್ತಿ

Update: 2020-07-23 18:45 GMT

ಕಾಂಗ್ರಾ: ಕೊರೋನ ವೈರಸ್ ಸಂಕಷ್ಟದ ನಡುವೆ ತನ್ನ ಪುತ್ರಿಯ ಆನ್ ಲೈನ್ ಶಿಕ್ಷಣಕ್ಕಾಗಿ ವ್ಯಕ್ತಿಯೊಬ್ಬ ತನ್ನ ಹಸುವನ್ನು ಮಾರಿ ಸ್ಮಾರ್ಟ್ ಫೋನ್ ಖರೀದಿಸಿದ ಘಟನೆ ನಡೆದಿದೆ.

ಕೊರೋನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಹಲವೆಡೆ ಆನ್ ಲೈನ್ ತರಗತಿಗಳು ಆರಂಭವಾಗಿವೆ. ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಕುಲದೀಪ್ ಕುಮಾರ್ ಗೂ ಇದೇ ರೀತಿ ತನ್ನ ಪುತ್ರಿಗೆ ಆನ್ ಲೈನ್ ಶಿಕ್ಷಣ ನೀಡಬೇಕೆಂದು ಆಸೆಯಿತ್ತು. ಆದರೆ ಸ್ಮಾರ್ಟ್ ಫೋನ್ ಖರೀದಿಗೆ ಕೈಯಲ್ಲಿ ಹಣವಿರಲಿಲ್ಲ. ಸುಮಾರು 2.5 ತಿಂಗಳ ಹಿಂದೆ ಸಾಲದಾರನಿಂದ ಕುಲದೀಪ್ ಹಣ ಪಡೆದು ನಂತರ ಫೋನ್ ಖರೀದಿಸಿದ್ದ. ಆದರೆ ತನಗೆ ಹಣ ವಾಪಸ್ ನೀಡಬೇಕು ಎಂದು ಸಾಲ ನೀಡಿದವನು ಬಲವಂತಪಡಿಸಿದ ನಂತರ ಕುಲದೀಪ್ ತನ್ನ ಹಸುವನ್ನು ಮಾರಿದ್ದಾರೆ.

ಕುಲದೀಪ್ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ರಾಜ್ಯಾಡಳಿತ ಕೂಡಲೇ ಕ್ರಮ ಕೈಗೊಂಡಿದೆ. ಕುಲದೀಪ್ ಕುಟುಂಬಕ್ಕೆ ಸಹಾಯ ಮಾಡುವುದಾಗಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News