ಪುತ್ತೂರು: ಕೊರೋನ 'ಹೈ ರಿಸ್ಕ್ ಏರಿಯಾ' ಸರಣಿ ಪರೀಕ್ಷಾ ಅಭಿಯಾನ

Update: 2020-07-24 07:34 GMT

ಪುತ್ತೂರು: ಎರಡಕ್ಕಿಂತ ಹೆಚ್ಚು ಕೋವಿಡ್-19 ಪ್ರಕರಣ ದಾಖಲಾಗಿರುವ ಪುತ್ತೂರು ಮತ್ತು ಕಡಬ ತಾಲೂಕುಗಳ 6 ಆರೋಗ್ಯ  ಕೇಂದ್ರಗಳ ವ್ಯಾಪ್ತಿಯನ್ನು ಕೊರೊನಾ ಸೋಂಕು ಪ್ರಕರಣದ `ಹೈ ರಿಸ್ಕ್ ಏರಿಯಾ' ಎಂದು ಗುರುತಿಸಲಾಗಿದ್ದು, ಈ ಪ್ರದೇಶದ ಎಲ್ಲಾ ಮನೆಗಳಿಗೆ ಕೊರೋನ ವಾರಿಯರ್ಸ್ ತಂಡ ಭೇಟಿ ನೀಡಿ `ಪಲ್ಸ್ ಓಕ್ಸಿ ಮೀಟರ್' ಪರೀಕ್ಷೆ ನಡೆಸಲಿದೆ. ಈ ಬಗ್ಗೆ ಈಗಾಗಲೇ ಕೊರೊನಾ ವಾರಿಯರ್ಸ್ ಕಾರ್ಯಪ್ರವರ್ತರಾಗಿದ್ದಾರೆ. 

ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ಮಾರ್ಗದರ್ಶನದಲ್ಲಿ ಆರೋಗ್ಯ ಸಹಾಯಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಭೆ ನಡೆಸಿ ಸರಣಿ ಪರೀಕ್ಷಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. 

ಪುತ್ತೂರು ನಗರ, ತಿಂಗಳಾಡಿ, ನೆಲ್ಯಾಡಿ, ಸರ್ವೆ, ಉಪ್ಪಿನಂಗಡಿ ಮತ್ತು ಕಡಬ ಸಮುದಾಯ ಆರೋಗ್ಯ ಕೇಂದ್ರಗಳ ವ್ಯಾಪ್ತಿಯನ್ನು ಹೈ ರಿಸ್ಕ್ ಏರಿಯಾ ಎಂದು ಗುರುತಿಸಲಾಗಿದ್ದು, ಈ ಪ್ರದೇಶದಲ್ಲಿ ತಪಾಸಣಾ ಅಭಿಯಾನ ನಡೆಯಲಿದೆ. ಪರೀಕ್ಷೆಗಾಗಿ ಒಟ್ಟು 169 ಪಲ್ಸ್ ಓಕ್ಸಿ ಮೀಟರ್ ಬಂದಿದೆ. ಮುಂದಿನ ಒಂದು ವಾರಗಳ ಕಾಲ ನಿರಂತರವಾಗಿ ಅಭಿಯಾನ ನಡೆಯಲಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News