​59 ಎಮ್ಮೆ ಕರುಗಳ ಅಕ್ರಮ ಸಾಗಾಟ: ನಾಲ್ವರ ಬಂಧನ

Update: 2020-07-24 16:22 GMT

ಕೋಟ, ಜು.24: ಕಂಟೇನರ್ ಲಾರಿಯಲ್ಲಿ ಅಕ್ರಮವಾಗಿ 59 ಎಮ್ಮೆ ಕರುಗಳನ್ನು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಕೋಟ ಪೊಲೀಸರು ಜು.24 ರಂದು ಬೆಳಗಿನ ಜಾವ ಸಾಬರಟ್ಟೆ ಚೆಕ್‌ಪೋಸ್ಟ್‌ನಲ್ಲಿ ಬಂಧಿಸಿದ್ದಾರೆ.

ಕೇರಳ ವಯನಾಡಿನ ಅಬ್ದುಲ್ ಜಬ್ಬಾರ್(35), ಜೋಮುನ್(36), ಶಂಶುದ್ದೀನ್(34), ಹರಿಯಾಣ ರಾಜ್ಯದ ಮುಖೀಮ್(18) ಬಂಧಿತ ಆರೋಪಿಗಳು. ಅದೇ ರೀತಿ ಜಾನುವಾರುಗಳ ಮಾಲಕ ವಯನಾಡಿನ ಅಬ್ದುಲ್ ಅಜೀಜ್ ಹಾಗೂ ಲಾರಿಯ ಮಾಲಕ ಮೈಸೂರಿನ ರಫೀಕ್ ವಿರದ್ಧವೂ ಪ್ರಕರಣ ದಾಖಲಾಗಿದೆ.

ಶಿವಮೊಗ್ಗೆ ಕಡೆಯಿಂದ ಕೇರಳ ರಾಜ್ಯಕ್ಕೆ ಮಾಂಸ ಮಾಡುವ ಉದ್ದೇಶದಿಂದ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2,00,000ರೂ. ಮೌಲ್ಯದ 59 ಎಮ್ಮೆಯ ಕರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದೇ ರೀತಿ 8,00,000ರೂ. ಮೌಲ್ಯದ ಲಾರಿಯನ್ನು ಸ್ವಾಧೀನಪಡಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News