ಉಪ್ಪಿನಂಗಡಿ ಸಾರ್ವಜನಿಕ ಶೌಚಾಲಯ ಸೀಲ್‍ಡೌನ್

Update: 2020-07-25 11:21 GMT

ಉಪ್ಪಿನಂಗಡಿ: ಇಲ್ಲಿನ ಸಾರ್ವಜನಿಕ ಶೌಚಾಲಯದ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢವಾಗಿದ್ದು, ಈ ಹಿನ್ನೆಲೆಯಲ್ಲಿ  ಸಾರ್ವಜನಿಕ ಶೌಚಾಲಯವನ್ನು ಸೀಲ್‍ಡೌನ್ ಮಾಡಲಾಗಿದೆ.

ಉಪ್ಪಿನಂಗಡಿಯ ಬಸ್ ನಿಲ್ದಾಣದ ಬಳಿಯಿರುವ ಸಾರ್ವಜನಿಕ ಶೌಚಾಲಯದ 35ರ ಹರೆಯದ ಬಿಹಾರ ಮೂಲದ ಸಿಬ್ಬಂದಿಗೆ ಕಳೆದ ಮೂರು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಈತನ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರ ವರದಿ ಶನಿವಾರ ಬಂದಿದ್ದು, ಕೊರೋನ ಪಾಸಿಟಿವ್ ದೃಢವಾಗಿದೆ. ಬಳಿಕ ಶೌಚಾಲಯದ ಬದಿಯ ವಿಶ್ರಾಂತಿ ಕೋಣೆಯಲ್ಲಿ ವಿಶ್ರಾಂತಿಯಲ್ಲಿದ್ದ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶೌಚಾಲಯ ಸೀಲ್‍ಡೌನ್‍ಗೊಳಪಡಿಸಲಾಗಿದೆ.

ಇಲ್ಲಿನ ಬಸ್ ನಿಲ್ದಾಣ ಬಳಿಯ ಅಟೋ ರಿಕ್ಷಾ ತಂಗುದಾಣದ ಬಳಿಯಿರುವ ಶೌಚಾಲಯದ ನಿರ್ವಹಣೆಯನ್ನು ಇಲ್ಲಿಯ ಸಿಬ್ಬಂದಿಯೇ ಮಾಡುತ್ತಿದ್ದು, ಆದ್ದರಿಂದ ಅಲ್ಲಿಗೂ ಬೀಗ ಜಡಿಯಲಾಗಿದೆ. ಅಲ್ಲಿನ ಹಾಗೂ ಇಲ್ಲಿನ ಮೂವರು ಸಿಬ್ಬಂದಿಯನ್ನು ಇಲ್ಲಿನ ಶೌಚಾಲಯದ ಬಳಿಯ ವಿಶ್ರಾಂತಿ ಗೃಹದಲ್ಲಿ ಇರಲು ಸೂಚಿಸಲಾಗಿದೆ.
ಈ ಸಂದರ್ಭ ಕಂದಾಯ ನಿರೀಕ್ಷಕ ಜಯವಿಕ್ರಮ್ ಹಾಗೂ ಗ್ರಾ.ಪಂ. ಸಿಬ್ಬಂದಿ ಮಹಾಲಿಂಗ ಕಜೆಕ್ಕಾರು ಉಪಸ್ಥಿತರಿದ್ದರು.   

ಕೊರೋನಾ ಪಾಸಿಟಿವ್ ದೃಢವಾದ ಹಿನ್ನೆಲೆಯಲ್ಲಿ ಶೌಚಾಲಯವನ್ನು ಸ್ಯಾನಿಟೈಸ್ ಮಾಡಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News