ಅಡ್ಯಾರ್ ಕಣ್ಣೂರಿನಲ್ಲಿ ಹಜ್ ಭವನಕ್ಕೆ ಮುಸ್ಲಿಂ ಒಕ್ಕೂಟ ವಿರೋಧ

Update: 2020-07-25 13:09 GMT

ಮಂಗಳೂರು, ಜು.25: ಬಜ್ಪೆಯ ಹಳೆಯ ವಿಮಾನ ನಿಲ್ದಾಣ ಸಮೀಪ ಉದ್ದೇಶಿತ ಹಜ್ ಭವನಕ್ಕೆ ಕಾದಿರಿಸಿದ ಸ್ಥಳದಲ್ಲಿ ಹಜ್ ಭವನ ನಿರ್ಮಿಸದೆ ಅಡ್ಯಾರ್ ಕಣ್ಣೂರಿನಲ್ಲಿ ಹಜ್ ಭವನ ನಿರ್ಮಿಸುವ ಪ್ರಸ್ತಾವಕ್ಕೆ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಖಂಡಿಸಿದ್ದಾರೆ.

ರಾಜ್ಯ ಸರಕಾರದ ಅಲ್ಪಸಂಖ್ಯಾತ ಇಲಾಖೆಯ ಅಧೀನದಲ್ಲಿ ಬರುವ ರಾಜ್ಯ ಹಜ್ ಕಮಿಟಿಯು ಬಜ್ಪೆಯಲ್ಲಿ ಹಜ್ ಭವನ ನಿರ್ಮಿಸಲು ಮುಂದಾಗಿದೆ. ಅದಕ್ಕಾಗಿ ಸುಮಾರು 2 ಎಕರೆಗೂ ಅಧಿಕ ಜಮೀನನ್ನು ಮಂಜೂರು ಮಾಡಲಾಗಿದೆ. ಇದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವುದರಿಂದ ಹಜ್ ಭವನ ನಿರ್ಮಾಣಕ್ಕೆ ಸೂಕ್ತವಾದ ಸ್ಥಳ ಎಂದು ಜನಾಭಿಪ್ರಾಯವಾಗಿದೆ. ಹಜ್ ಭವನ ನಿರ್ಮಾಣಕ್ಕೆ ಬಜೆಟ್ಟಿನಲ್ಲಿ ಹಣವನ್ನೂ ಮಂಜೂರು ಮಾಡಲಾಗಿದೆ. ಈ ಮಧ್ಯೆ ಅಡ್ಯಾರ್ ಕಣ್ಣೂರು ಎಂಬಲ್ಲಿನ 65 ಸೆಂಟ್ಸ್ ಜಮೀನಿನಲ್ಲಿ ಹಜ್ ಭವನ ನಿರ್ಮಾಣ ಮಾಡುವ ಬಗ್ಗೆ ಹಜ್ ಭವನ ನಿರ್ಮಾಣ ಸಮಿತಿಯ ಕೆಲವು ಸದಸ್ಯರು ಒಲವು ಹೊಂದಿದ್ದಾರೆ. ಆದರೆ, ಇದರಿಂದ ಹಜ್ಯಾತ್ರಿಗಳಿಗೆ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ಅಡ್ಯಾರ್ ಕಣ್ಣೂರಿನಲ್ಲಿ ಹಜ್ ಭವನ ನಿರ್ಮಿಸುವ ಯೋಜನೆಯನ್ನು ಕೈ ಬಿಟ್ಟು ಬಜ್ಪೆಯಲ್ಲೇ ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News