ಕೊವ್ಯಾಕ್ಸಿನ್ ಮಾನವನ ಮೇಲಿನ ಪ್ರಯೋಗ: ಫಲಿತಾಂಶ ಉತ್ತೇಜನಕಾರಿ; ಮುಖ್ಯ ವೈದ್ಯೆ
Update: 2020-07-26 19:37 IST
ರೋಹ್ಟಕ್, ಜು. 26: ಕೊವ್ಯಾಕ್ಸಿನ್‌ನ ಪ್ರಥಮ ಹಂತದ ಮೊದಲ ಭಾಗದ ಮಾನವನ ಮೇಲಿನ ಪ್ರಯೋಗ ಶನಿವಾರ ರೊಹ್ಟಕ್‌ನ ಸ್ನಾತಕೋತ್ತರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ನಲ್ಲಿ ಪೂರ್ಣಗೊಂಡಿದೆ ಎಂದು ಲಸಿಕೆಯ ಪರೀಕ್ಷಾ ತಂಡದ ಮುಖ್ಯ ವೈದ್ಯೆ ಡಾ. ಸವಿತಾ ವರ್ಮಾ ಹೇಳಿದ್ದಾರೆ.
ಶನಿವಾರ ಪ್ರಥಮ ಹಂತದ ಎರಡನೇ ಭಾಗದಲ್ಲಿ 6 ಮಂದಿಗೆ ಲಸಿಕೆ ಪ್ರಯೋಗ ನಡೆಸಲಾಗಿದೆ ಎಂದು ಡಾ. ವರ್ಮಾ ಹೇಳಿದ್ದಾರೆ. ಕೊವ್ಯಾಕ್ಸಿನ್‌ನ ಪ್ರಥಮ ಹಂತದ ಮೊದಲ ಭಾಗದ ಪ್ರಯೋಗ ಪೂರ್ಣಗೊಂಡಿದೆ. ಭಾರತಾದ್ಯಂತ 50 ಮಂದಿಗೆ ಲಸಿಕೆ ಪ್ರಯೋಗ ನಡೆಸಲಾಗಿದೆ. ಅಲ್ಲದೆ ಇದರಿಂದ ದೊರಕಿದ ಫಲಿತಾಂಶ ಉತ್ತೇಜನಕಾರಿಯಾಗಿದೆ. ಶನಿವಾರ ಪ್ರಥಮ ಹಂತದ ಎರಡನೇ ಭಾಗದಲ್ಲಿ 6 ಮಂದಿ ಮೇಲೆ ಪ್ರಯೋಗ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೊರೋನ ವೈರಸ್ ವಿರುದ್ಧದ ಭಾರತದ ಮೊದಲ ಔಷಧ ಕೊವ್ಯಾಕ್ಸಿನ್‌ನ ಮಾನವನ ಮೇಲಿನ ಪ್ರಯೋಗವನ್ನು ಪಿಜಿಐ ರೋಹ್ಟಕ್‌ನಲ್ಲಿ ಜುಲೈ 17ರಂದು ಮಾಡಲಾಗಿತ್ತು. ಅಂದು ಮೂವರ ಮೇಲೆ ಪ್ರಯೋಗ ನಡೆಸಲಾಗಿತ್ತು.