ಕೊರೋನ ಪೀಡಿತ ಟೆಕ್ಸಾಸ್‌ಗೆ ಈಗ ಚಂಡಮಾರುತ ಭೀತಿ?

Update: 2020-07-26 16:16 GMT

ಹ್ಯೂಸ್ಟನ್, ಜು.25: ಕೊರೋನ ವೈರಸ್ ಹಾವಳಿಯಿಂದ ತತ್ತರಿಸಿರುವ ಅಮೆರಿಕದ ಟೆಕ್ಸಾಸ್ ರಾಜ್ಯಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಚಂಡಮಾರುತದ ಭೀತಿ ಎದುರಾಗಿದೆ. ಅಟ್ಲಾಂಟಿಕ್ ಸಾಗರದಲ್ಲಿ ರೂಪುಗೊಂಡಿರುವ 2020ರ ಪ್ರಪ್ರಥಮ ಚಂಡಮಾರುತ ಹನ್ನಾ ಶನಿವಾರ ಟೆಕ್ಸಾಸ್ ಕರಾವಳಿಗೆ ಅಪ್ಪಳಿಸಿದ್ದು, ಭಾರೀ ಮಳೆ ಸುರಿಯುತ್ತಿದೆ, ದಿಢೀರ್ ನೆರೆಸೃಷ್ಟಿಯಾಗುವ ಅಪಾಯವುಂಟಾಗಿದೆ.

ಗಂಟೆಗೆ 90 ಮೈಲು ತಾಸು ವೇಗದಲ್ಲಿ ಧಾವಿಸುತ್ತಿರುವ ಚಂಡಮಾರುತವು ಶನಿವಾರ ಸಂಜೆ 5:00 ಗಂಟೆಗೆ ಟೆಕ್ಸಾಸ್‌ನ ಪೆಡ್ರೆ ದ್ವೀಪದ ಮೇಲೆ ಅಪ್ಪಳಿಸಿದೆಯೆಂದು ಅಮೆರಿಕದ ರಾಷ್ಟ್ರೀಯ ಚಂಡಮಾರುತ ಕೇಂದ್ರವು ತಿಳಿಸಿದೆ.

ಪ್ರಾಣಾಪಾಯಕಾರಿಯಾಗಬಲ್ಲಂತಹ ಈ ಚಂಡಮಾರುತವು ದಕ್ಷಿಣ ಟೆಕ್ಸಾಸ್ ಹಾಗೂ ಈಶಾನ್ಯ ಟೆಕ್ಸಾಸ್ ಕರಾವಳಿಯ ಭಾಗಗಳತ್ತ ಮುನ್ನುಗ್ಗುವ ಸಾಧ್ಯತೆಯಿದೆ. ಧಾರಾಕಾರಾವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದಿಢೀರ್ ಪ್ರವಾಹ ಸೃಷ್ಟಿಯಾಗುವ ಸಾಧ್ಯತೆಯಿದೆ. ಕೆಲವು ಪ್ರದೇಶಗಳಲ್ಲಿ ಆರು ಅಡಿ ಎತ್ತರದಲ್ಲಿ ಚಂಡ ಮಾರುತ ಅಪ್ಪಳಿಸಲಿದೆಯೆಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News