ಪುತ್ತೂರಿನಲ್ಲಿ 11 ಮಂದಿಗೆ ಕೊರೋನ ಸೋಂಕು ದೃಢ

Update: 2020-07-27 07:42 GMT

ಪುತ್ತೂರು, ಜು.27: ನಗರಸಭಾ ಕಾರ್ಯಾಲಯದ 41 ವರ್ಷ ಪ್ರಾಯದ ಇಂಜಿನಿಯರ್ ನಗರಸಭಾ ವ್ಯಾಪ್ತಿಯ ಬನ್ನೂರಿನ 1 ವರ್ಷ ಪ್ರಾಯದ ಗಂಡು ಮಗು ಹಾಗೂ 31 ವರ್ಷ ಪ್ರಾಯದ ಮಗುವಿನ ತಾಯಿ ಸಹಿತ ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಸೋಮವಾರ 11 ಕೊರೋನ ಪ್ರಕರಣಗಳು ದೃಢ ಪಟ್ಟಿವೆ.

ನಗರಸಭಾ ಕಾರ್ಯಾಲಯದ 29 ವರ್ಷ ಪ್ರಾಯದ ಇಂಜಿನಿಯರ್‌ ಗೆ ರವಿವಾರ ಕೊರೋನ ದೃಢಪಟ್ಟಿತು. ಅದೇ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಇನ್ನೊರ್ವ ಇಂಜಿನಿಯರ್‌ಗೆ ಸೋಮವಾರ ಕೊರೋನ ದೃಢಪಟ್ಟಿದೆ. ಉಪ್ಪಿನಂಗಡಿ ಬಸ್ ನಿಲ್ದಾಣ ಸಮೀಪದ ಸುಲಭ್ ಶೌಚಾಲಯದ 60, 50, 48 ವರ್ಷ ವಯಸ್ಸಿನ ಬಿಹಾರ ಮೂಲದ ಕಾರ್ಮಿಕರು, ಅರಿಯಡ್ಕ ಗ್ರಾಮದ 43 ವರ್ಷ ಪ್ರಾಯದ ಪುರುಷ, 72 ವರ್ಷ ಪ್ರಾಯದ ಪುರುಷ, 35 ವರ್ಷ ಪ್ರಾಯದ ಮಹಿಳೆಯಲ್ಲಿ ಕೊರೋನ ದೃಢ ಪಟ್ಟಿದೆ. ಕೊಲ ಗ್ರಾಮದ ಒಳಕಡಮ ನಿವಾಸಿ 33 ವರ್ಷದ ಯುವಕ, ಬೆಳಂದೂರು ಗ್ರಾಮದ 50 ವರ್ಷ ಪ್ರಾಯದ ಪುರುಷನಲ್ಲಿ ಸೋಮವಾರ ಕೊರೋನ ದೃಢಪಟ್ಟಿದೆ. ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಈ ತನಕ ಒಟ್ಟು 187 ಕೊರೋನ ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News