ಉಡುಪಿ ಸಿಟಿ ಸೆಂಟರ್‌ನಲ್ಲಿ ‘ಬಿಗ್ ಶೂಸ್’ ಶುಭಾರಂಭ

Update: 2020-07-27 11:02 GMT

ಉಡುಪಿ, ಜು.27: ಉಡುಪಿ ನಗರದ ಪ್ರತಿಷ್ಠಿತ ಹಾಗೂ ಅತ್ಯಂತ ಬೃಹತ್ ಪಾದರಕ್ಷೆ ಮಳಿಗೆಯಾಗಿರುವ ‘ಶೂ ಬಜಾರ್’ ಗ್ರೂಪ್‌ನ ನಾಲ್ಕನೆ ಶಾಖೆ ‘ಬಿಗ್ ಶೂಸ್’ ಜು.27ರಂದು ಸೋಮವಾರ ಉಡುಪಿ ಸಿಟಿ ಸೆಂಟರ್ ಮಾಲ್‌ನ ಗ್ರೌಂಡ್ ಫ್ಲೋರ್‌ನಲ್ಲಿ ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ಸಿಟಿ ಸೆಂಟರ್ ಆಡಳಿತ ನಿರ್ದೇಶಕ ಜಮಾಲುದ್ದೀನ್ ಅಬ್ಬಾಸ್ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಉಡುಪಿಯ ಗೀತಾಂಜಲಿ ಸಿಲ್ಕ್ಸ್‌ ನ ರಾಮಕೃಷ್ಣ(ಆರ್.ಕೆ.), ಖಾಲೀದ್ ಉಡುಪಿ ಭಾಗ ವಹಿಸಿದ್ದರು.‘ಶೂ ಬಜಾರ್’ ಮಾಲಕರಾದ ಹಾಜಿ.ಕೆ.ಅಜಬ್ಬ, ಶಾಹಿದ್ ಕಾಪು ಮೊದಲಾ ದವರು ಉಪಸ್ಥಿತರಿದ್ದರು.

‘ಬಿಗ್ ಶೂಸ್’ ನಲ್ಲಿ ಪುರುಷರ, ಮಹಿಳೆಯರ, ಮಕ್ಕಳ ನವೀನ ಮಾದರಿಯ ವಿವಿಧ ಬ್ರಾಂಡಿನ ಹಾಗೂ ಉತ್ಕೃಷ್ಟ ಗುಣಮಟ್ಟದ ಪಾದರಕ್ಷೆಗಳು, ಶೂಸ್‌ಗಳು ಲಭ್ಯವಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News