×
Ad

ಭಾರತದ ಕಾರ್ಬೆಟ್ ಪಾರ್ಕ್‌ನಲ್ಲಿ ಅತಿ ಹೆಚ್ಚು ಹುಲಿಗಳು

Update: 2020-07-28 22:09 IST

ಡೆಹ್ರಾಡೂನ್, ಜು. 28: ಭಾರತದ 50 ಹುಲಿ ಸಂರಕ್ಷಣಾ ಧಾಮದಲ್ಲಿ ಉತ್ತರಾಖಂಡದ ಕಾರ್ಬೆಟ್ ಹುಲಿ ಸಂರಕ್ಷಣಾ ಧಾಮದಲ್ಲಿ ಅತಿ ಹೆಚ್ಚು ಹುಲಿ ಸಾಂದ್ರತೆ ಇರುವುದು ವರದಿಯಾಗಿದೆ.

ಇಲ್ಲಿ ಪ್ರತಿ 100 ಚದರ ಕಿಲೋ ಮೀಟರ್‌ಗೆ 14 ಹುಲಿಗಳು ಕಂಡು ಬಂದಿವೆ. ಇದರ ನಂತರ ಸ್ಥಾನವನ್ನು ಅನುಕ್ರಮವಾಗಿ ಕಾಝಿರಂಗಾ, ನಾಗರಹೊಳೆ ಹಾಗೂ ಒರಾಂಗ ಹುಲಿ ಸಂರಕ್ಷಣಾ ಧಾಮ ಪಡೆದುಕೊಂಡಿದೆ ಎಂದು ಜಾಗತಿಕ ಹುಲಿ ದಿನಾಚರಣೆ ಯ ಮುನ್ನಾ ದಿನವಾದ ಮಂಗಳವಾರ ಕೇಂದ್ರ ಪರಸರ ಸಚಿವ ಪ್ರಕಾಶ್ ಜಾವ್ಡೇಕರ್ ಬಿಡುಗಡೆಗೊಳಿಸಿದ 656 ಪುಟಗಳ ‘ಸ್ಟೆಟಸ್ ಆಫ್ ಟೈಗರ್ ಕೊ-ಪ್ರೆಡೇಟರ್ಸ್ ಆ್ಯಂಡ್ ಪ್ರೇ ಇನ್ ಇಂಡಿಯಾ’ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News