×
Ad

ಚೀನಾ ಆ್ಯಪ್‌ಗಳ ನಿಷೇಧ : ಭಾರತಕ್ಕೆ ಚೀನಾ ತರಾಟೆ

Update: 2020-07-28 22:17 IST

ಹೊಸದಿಲ್ಲಿ, ಜು. 28: ಭಾರತ ಸರಕಾರ ಮತ್ತೆ ಹಲವು ಚೀನಾ ಆ್ಯಪ್‌ಗಳ ಮೇಲೆ ನಿಷೇಧ ವಿಧಿಸಿದ ದಿನದ ಬಳಿಕ ಭಾರತದಲ್ಲಿರುವ ಚೀನಾ ರಾಯಭಾರಿ ಕಚೇರಿ ಈ ನಡೆಯನ್ನು ಕಟುವಾಗಿ ಟೀಕಿಸಿದೆ.

ಚೀನಾ ಉದ್ಯಮಗಳು ಸೇರಿದಂತೆ ಭಾರತದಲ್ಲಿ ಅಂತಾರಾಷ್ಟ್ರೀಯ ಹೂಡಿಕೆದಾರರ ಕಾನೂನು ಬದ್ಧ ಹಿತಾಸಕ್ತಿ ಹಾಗೂ ಹಕ್ಕನ್ನು ರಕ್ಷಿಸುವ ಜವಾಬ್ದಾರಿ ಭಾರತ ಸರಕಾರಕ್ಕೆ ಇದೆ ಎಂದು ಹೇಳಿದೆ. ಚೀನಾ ಹಾಗೂ ಭಾರತದ ನಡುವಿನ ಪ್ರಾಯೋಗಿಕ ಸಹಕಾರ ಪರಸ್ಪರ ಸಹಕಾರಿಯಾಗಿದೆ. ಇಂತಹ ಸಹಕಾರದಲ್ಲಿ ಉದ್ದೇಶಪೂರ್ವಕ ಹಸ್ತಕ್ಷೇಪ ಭಾರತದ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲಾರದು ಎಂದು ಭಾರತದಲ್ಲಿರುವ ಚೀನಾ ರಾಯಭಾರಿ ಕಚೇರಿಯ ವಕ್ತಾರ ಜಿ ರೋಂಗ್ ತಿಳಿಸಿದ್ದಾರೆ. ಚೀನಾ ಕಂಪೆನಿಗಳ ಕಾನೂನುಬದ್ಧ ಹಕ್ಕು ಹಾಗೂ ಹಿತಾಸಕ್ತಿಯನ್ನು ರಕ್ಷಿಸಲು ಅಗತ್ಯದ ಕ್ರಮಗಳನ್ನು ಚೀನ ತೆಗೆದುಕೊಳ್ಳಲಿದೆ ಎಂದು ರೋಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News