ರಾಮ ಮಂದಿರ ನಿರ್ಮಾಣವಾದ ತಕ್ಷಣ ಕೊರೋನ ವೈರಸ್ ನಾಶವಾಗುತ್ತದೆ ಎಂದ ಬಿಜೆಪಿ ಸಂಸದೆ!
Update: 2020-07-28 22:59 IST
ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ ತಕ್ಷಣ ಕೊರೋನ ವೈರಸ್ ಸೋಂಕು ನಾಶವಾಗುತ್ತದೆ ಎಂದು ಬಿಜೆಪಿ ಸಂಸದೆಯೊಬ್ಬರು ಹೇಳಿಕೆ ನೀಡಿದ್ದಾರೆ.
ರಾಜಸ್ಥಾನದ ದೌಸಾ ಲೋಕಸಭಾ ಕ್ಷೇತ್ರದ ಸಂಸದೆ ಜಸ್ಕೌರ್ ಮೀನಾ ಕೋವಿಡ್ ಬಿಕ್ಕಟ್ಟಿಗೆ ರಾಮ ಮಂದಿರ ನಿರ್ಮಾಣ ಪರಿಹಾರ ಎಂದಿದ್ದಾರೆ.
“ನಾವು ಆಧ್ಯಾತ್ಮಕ ಶಕ್ತಿಗಳನ್ನು ನಂಬುವವರು ಮತ್ತು ಅನುಸರಿಸುವವರು. ರಾಮ ಮಂದಿರ ನಿರ್ಮಾಣವಾದ ತಕ್ಷಣ ಕೊರೋನ ವೈರಸ್ ನಾಶವಾಗಲಿದೆ” ಎಂದವರು ಹೇಳಿದರು.