ಕೋಯಿಕ್ಕೋಡ್: ಪಾರ್ಶ್ವವಾಯು ಪೀಡಿತ ವಿದೇಶಿ ಮಹಿಳೆಗೆ 'ಮೈತ್ರಾ' ಆಸ್ಪತ್ರೆಯ ವೈದ್ಯರ ತಂಡದಿಂದ ಯಶಸ್ವಿ ಚಿಕಿತ್ಸೆ

Update: 2020-07-30 07:29 GMT

ಕೋಯಿಕ್ಕೋಡ್: ಪಾರ್ಶ್ವವಾಯು ಪೀಡಿತರಾಗಿ ಶರೀರದ ಒಂದು ಭಾಗವು ಸಂಪೂರ್ಣವಾಗಿ ನಿಶ್ಚಲಗೊಂಡ ಸ್ಥಿತಿಯಲ್ಲಿದ್ದ ವಿದೇಶಿ ಮಹಿಳೆಯೊಬ್ಬರು ಒಂದು ತಿಂಗಳ ಕಾಲ ಮೈತ್ರಾ ಆಸ್ಪತ್ರೆಯಲ್ಲಿ ನ್ಯೂರೊ ಇಂಟರ್ ವೆನ್ಶನ್ ಮೂಲಕ ಚಿಕಿತ್ಸೆ ಪಡೆದಿದ್ದು, ಇದೀಗ ಗುಣಮುಖರಾಗಿದ್ದಾರೆ.

ರಕ್ತದ ಪ್ಲೇಟ್ ಲೆಟ್ ಗಳು ಕಡಿಮೆಯಾಗುವ ಕಾಯಿಲೆಯೂ ಈ ಮಹಿಳೆಗೆ ಇದ್ದು, ಚಿಕಿತ್ಸೆ ನೀಡುವುದು ಅಪಾಯಕಾರಿಯಾಗಿತ್ತು. ವೈದ್ಯರ ತಂಡದ ನಿರಂತರ ಪ್ರಯತ್ನದಿಂದ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ನ್ಯೂರೊ ಇಂಟರ್ ವೆನ್ಶನ್ ನಡೆಸಿದ ತಂಡದ ನೇತೃತ್ವ ವಹಿಸಿದ್ದ ಸೀನಿಯರ್ ಕನ್ಸಲ್ಟಂಟ್ (ಎಂಡೋವಾಸ್ಕುಲರ್ ನ್ಯೂರೋ ಆ್ಯಂಡ್ ಬಾಡೀ ಇಂಟರ್ ವೆನ್ಶನ್) ಡಾ.ಪಿ.ಕೆ.ಮುಹಮ್ಮದ್ ರಫೀಕ್ ತಿಳಿಸಿದ್ದಾರೆ.

ಪಾರ್ಶ್ವವಾಯುವಿಗೆ ತುತ್ತಾಗಿ ಒಂದು ತಿಂಗಳ ಬಳಿಕ ಮೆದುಳಿನ ಪ್ರಧಾನ ರಕ್ತನಾಳಗಳು ಸಂಪೂರ್ಣವಾಗಿ ಹಾನಿಗೊಂಡ ಅಪಾಯಕಾರಿ ಸ್ಥಿತಿಯಲ್ಲಿ ಇದೇ ಮೊದಲ ಬಾರಿಗೆ ಭಾರತದಲ್ಲಿ ಈ ಚಿಕಿತ್ಸೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಡಾ.ಕೆ.ಎ.ಸಲಾಂ, ಡಾ.ವಿ.ವಿ.ಅಶ್ರಫ್, ಡಾ.ಎ.ವಿ.ಕಣ್ಣನ್, ಡಾ.ಗೋಪಾಲ್, ಡಾ.ನಿತಿನ್, ಡಾ. ಸ್ಮೇರಾ ಮತ್ತಿತರರು ವೈದ್ಯರ ತಂಡದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News