×
Ad

‘ಸರಕಾರ ಹೇಳಿದ್ದು ಸುಳ್ಳು, ನಾನು ಗೃಹಬಂಧನದಲ್ಲಿದ್ದೇನೆ’: ವಿಡಿಯೋದಲ್ಲಿ ಸೈಫುದ್ದೀನ್ ಸೋಝ್

Update: 2020-07-30 13:14 IST

ಹೊಸದಿಲ್ಲಿ: ಶ್ರೀನಗರದಲ್ಲಿರುವ ತನ್ನ ಮನೆಯಲ್ಲಿ ತನ್ನನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸೈಫುದ್ದೀನ್ ಸೋಝ್ ಹೇಳಿದ್ದು, ಕೇಂದ್ರದ ಪ್ರತಿಪಾದನೆಯನ್ನು ಅಲ್ಲಗಳೆದಿದ್ದಾರೆ.

ಬುಧವಾರ ಸುಪ್ರೀಂ ಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದ ಕೇಂದ್ರ ಸರಕಾರ ಸೈಫುದ್ದೀನ್ ಸೋಝ್ ಗೃಹಬಂಧನದಲ್ಲಿಲ್ಲ ಎಂದು ಹೇಳಿತ್ತು. ಸೋಝ್ ರನ್ನು ಬಿಡುಗಡೆಗೊಳಿಸಬೇಕು ಎಂದು ಕೋರಿ ಅವರ ಪತ್ನಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

“ಸೈಫುದ್ದೀನ್ ಯಾವ ಪ್ರದೇಶಕ್ಕೆ ಬೇಕಾದರೂ ಹೋಗಬಹುದು. ಅವರಿಗೆ ಯಾವುದೇ ನಿರ್ಬಂಧಗಳಿಲ್ಲ. ಅವರನ್ನು ಬಂಧನದಲ್ಲಿರಿಸಿಲ್ಲ” ಎಂದು ಜಮ್ಮು ಮತ್ತು ಕಾಶ್ಮೀರ ಗೃಹ ಇಲಾಖೆ ತಿಳಿಸಿತ್ತು.

ಆದರೆ ಎನ್ ಡಿಟಿವಿ ಸೋಝ್ ರನ್ನು ಮಾತನಾಡಿಸಲು ಅವರ ಮನೆಗೆ ತೆರಳಿದಾಗ ಮಾತನಾಡಲು ಅವಕಾಶ ನೀಡಿಲ್ಲ.

“ನಾನು ಎಲ್ಲಿಗೆ ಬೇಕಾದರೂ ಹೋಗಲು ಅವಕಾಶವಿದೆ ಎಂದು ಆಡಳಿತವು ತಿಳಿಸಿದೆ. ಆದರೆ ಈ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ನಾನು ಹೊರಹೋಗಲು ಬಿಡುತ್ತಿಲ್ಲ. ಇದು ಪೊಲೀಸ್ ರಾಜ್ಯವಾಗಿದೆ” ಎಂದವರು ಹೇಳಿರುವುದನ್ನು ಎನ್ ಡಿಟಿವಿ ಪ್ರಸಾರ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News