×
Ad

ಮಣಿಪುರ: ಉಗ್ರರ ದಾಳಿಗೆ ಮೂವರು ಅಸ್ಸಾಂ ರೈಫಲ್ಸ್ ಯೋಧರು ಹುತಾತ್ಮ

Update: 2020-07-30 13:30 IST

 ಇಂಫಾಲ್, ಜು.30: ಮ್ಯಾನ್ಮಾರ್ ಗಡಿಯ ಸಮೀಪ ಮಣಿಪುರದ ಜಿಲ್ಲೆಯೊಂದರಲ್ಲಿ ಉಗ್ರರ ಹೊಂಚುದಾಳಿಗೆ ಅಸ್ಸಾಂ ರೈಫಲ್ಸ್‌ನ ಮೂವರು ಸೈನಿಕರು ಪ್ರಾಣ ತೆತ್ತಿದ್ದಾರೆ. ಇತರ ಐವರು ಯೋಧರು ಗಾಯಗೊಂಡಿದ್ದು, ಇವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

15 ಅಸ್ಸಾಂ ರೈಫಲ್ಸ್ ಯೋಧರನ್ನು ಒಳಗೊಂಡ ತಂಡ ಬುಧವಾರ ಸಂಜೆಯಿಂದ ಮಣಿಪುರದ ಚಾಂಡೇಲ್ ಜಿಲ್ಲೆಯಲ್ಲಿ ಗಸ್ತುನಿರತವಾಗಿತ್ತು. ಈಶಾನ್ಯ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಬಂಡಾಯ ಗುಂಪುಗಳಲ್ಲಿ ಒಂದಾಗಿರುವ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ)ಶಂಕಿತ ಉಗ್ರರು ದಾಳಿ ನಡೆಸಿದ್ದಾರೆ.

ಅಸ್ಸಾಂ ರೈಫಲ್ಸ್ ಯೋಧರ ಮೇಲೆ ಉಗ್ರರು ಮೊದಲಿಗೆ ಸುಧಾರಿತ ಸ್ಪೋಟಕ ಸಾಧನ(ಐಇಡಿ)ಮೂಲಕ ದಾಳಿ ನಡೆಸಿದ್ದು, ಬಳಿಕ ಸಣ್ಣ ಶಸ್ತ್ರಾಸ್ತ್ರಗಳ ಮೂಲಕ ಹೊಂಚು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News