×
Ad

ಅಯೋಧ್ಯೆ ರಾಮಮಂದಿರ ಕಾರ್ಯಕ್ರಮ: ಅರ್ಚಕ, ಕರ್ತವ್ಯದಲ್ಲಿದ್ದ 16 ಪೊಲೀಸರಿಗೆ ಕೋವಿಡ್-19 ಸೋಂಕು

Update: 2020-07-30 13:45 IST

 ಅಯೋಧ್ಯೆ, ಜು.30: ಆಗಸ್ಟ್ 5ರಂದು ನಿಗದಿಯಾಗಿರುವ ಅಯೋಧ್ಯೆ ರಾಮಮಂದಿರದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿದ್ದ ಅರ್ಚಕ ಹಾಗೂ ಕಾರ್ಯಕ್ರಮದ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ 16 ಪೊಲೀಸರಿಗೆ ಕೊರೋನ ವೈರಸ್ ಸೋಂಕು ತಗಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 50 ಗಣ್ಯರ ಜೊತೆಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಅಯೋಧ್ಯೆಯಲ್ಲಿ ದೀಪಾವಳಿ ರೀತಿಯ ತಯಾರಿ ನಡೆಯುತ್ತಿದೆ.

ಭಕ್ತರು ಮಂದಿರದ ಭೂಮಿಪೂಜೆ ಕಾರ್ಯಕ್ರಮವನ್ನು ವೀಕ್ಷಿಸುವಂತಾಗಲು ಅಯೋಧ್ಯೆ ಎಲ್ಲೆಡೆ ಬೃಹತ್ ಗಾತ್ರದ ಸಿಸಿಟಿವಿ ಪರದೆಗಳನ್ನು ಹಾಕಲಾಗುತ್ತದೆ ಎಂದು ದೇವಸ್ಥಾನದ ಟ್ರಸ್ಟ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News