ಆಗಸ್ಟ್ 5ರಂದು ‘ಟೈಮ್ಸ್‌ ಸ್ಕ್ವೇರ್’ನಲ್ಲಿ ರಾಮ, ರಾಮ ಮಂದಿರದ ಚಿತ್ರ ಪ್ರದರ್ಶನ

Update: 2020-07-30 17:03 GMT

ನ್ಯೂಯಾರ್ಕ್, ಜು. 30: ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಅಡಿಗಲ್ಲು ಹಾಕುವ ದಿನವಾದ ಆಗಸ್ಟ್ 5ರಂದು ನ್ಯೂಯಾರ್ಕ್‌ನ ಐತಿಹಾಸಿಕ ‘ಟೈಮ್ಸ್ ಸ್ಕ್ವೇರ್’ನಲ್ಲಿ ರಾಮ ಮತ್ತು ರಾಮ ಮಂದಿರದ 3ಡಿ ಚಿತ್ರಗಳನ್ನು ಬೃಹತ್ ಪರದೆಗಳ ಮೂಲಕ ಪ್ರದರ್ಶಿಸಲಾಗುವುದು ಎಂದು ಅಮೆರಿಕನ್ ಇಂಡಿಯಾ ಪಬ್ಲಿಕ್ ಅಫೇರ್ಸ್ ಕಮಿಟಿಯ ಅಧ್ಯಕ್ಷ ಜಗದೀಶ್ ಸೆವ್‌ಹಾನಿ ಬುಧವಾರ ಹೇಳಿದ್ದಾರೆ.

ಆಗಸ್ಟ್ 5ರಂದು ನ್ಯೂಯಾರ್ಕ್‌ನಲ್ಲಿ ಐತಿಹಾಸಿಕ ಕ್ಷಣವನ್ನು ಆಚರಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು. ಅಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮ ಮಂದಿರದ ಶಿಲಾನ್ಯಾಸವನ್ನು ಏರ್ಪಡಿಸಲಿದ್ದಾರೆ.

ಈ ಉದ್ದೇಶಕ್ಕಾಗಿ ದೈತ್ಯ ನ್ಯಾಸ್‌ಡಾಕ್ ಪರದೆ ಮತ್ತು 17,000 ಚದರ ಅಡಿ ವಿಸ್ತೀರ್ಣದ ಬೃಹತ್ ಎಲ್‌ಇಡಿ ಪರದೆಗಳನ್ನು ಬಾಡಿಗೆಗೆ ಪಡೆದುಕೊಳ್ಳಲಾಗಿದೆ ಎಂದರು. ಇವು ಜಗತ್ತಿನಲ್ಲೇ ಅತ್ಯಂತ ದೊಡ್ಡ ಹೊರಾಂಗಣ ಇಲೆಕ್ಟ್ರಾನಿಕ್ ಪರದೆಗಳು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News