ಐಟಿ ರಿಟರ್ನ್ ಪಾವತಿ ಅಂತಿಮ ಗಡುವು ಸೆ.30ಕ್ಕೆ ವಿಸ್ತರಣೆ

Update: 2020-07-30 17:28 GMT

ಹೊಸದಿಲ್ಲಿ, ಜು. 30: 2018-19ರ ವಿತ್ತ ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್‌ಗಳ ಸಲ್ಲಿಕೆಗೆ ಇರುವ ಅಂತಿಮ ಗಡುವನ್ನು ಕೇಂದ್ರ ಸರಕಾರವು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದೆ.

ಕೊರೋನ ವೈರಸ್ ಸಾಂಕ್ರಾಮಿಕದ ಹಾವಳಿಯ ಹಿನ್ನೆಲೆಯಲ್ಲಿ ತೆರಿಗೆ ಪಾವತಿದಾರರ ಹಿತದೃಷ್ಟಿಯಿಂದ 2018-19ರ ಸಾಲಿನ ಆದಾಯ ತೆರಿಗೆ ರಿಟರ್ನ್ ಪಾವತಿಗೆ ಇದ್ದ ಜುಲೈ 31,2020ರ ಅಂತಿಮ ಗಡುವನ್ನು 30 ಸೆಪ್ಟೆಂಬರ್ 2020ರವರೆಗೆ ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಗುರುವಾರ ಟ್ವೀಟಿಸಿದೆ.

2018-19ರ ಸಾಲಿನಲ್ಲಿ ಕೇಂದ್ರ ಸರಕಾರವು ಆದಾಯ ತೆರಿಗೆ ರಿಟರ್ನ್‌ನ ಅಂತಿಮ ಗಡುವನ್ನು ವಿಸ್ತರಿಸಿರುವುದು ಇದು ಸತತ ಮೂರನೇ ಸಲವಾಗಿದೆ.

ಐಟಿ ರಿಟರ್ನ್ ಪಾವತಿಗೆ ಇದ್ದ ಮಾರ್ಚ್ 31ರ ಅಂತಿಮ ಗಡುವನ್ನು ಜೂನ್ 30ರ ವರೆಗೆ ವಿಸ್ತರಿಸಲಾಗಿತ್ತು. ಆನಂತರ ಜೂನ್‌ನಲ್ಲಿ ಮತ್ತೆ ಅದನ್ನು ಜುಲೈ 31ರ ವರೆಗೆ ವಿಸ್ತರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News