ತನ್ನ ಬಂಗಲೆಯನ್ನು ಚೀನಾ ಕಾನ್ಸುಲೇಟ್‌ಗೆ ಬಾಡಿಗೆಗೆ ನೀಡಿದ ‘ಝೀ’ ಮೀಡಿಯಾದ ಸುಭಾಷ್ ಚಂದ್ರ

Update: 2020-07-30 17:38 GMT

ಮುಂಬೈ, ಜು. 30: ರಾಜ್ಯಸಭಾ ಸದಸ್ಯ ಹಾಗೂ ಝೀ ಮಾಧ್ಯಮ ಸಮೂಹದ ಪ್ರವರ್ತಕ ಸುಭಾಷ್ ಚಂದ್ರ ಅವರು ಮುಂಬೈಯಲ್ಲಿರುವ ತನ್ನ ಬಂಗಲೆಯನ್ನು ಚೀನಾ ಕಾನ್ಸುಲೇಟ್‌ಗೆ 2 ವರ್ಷಕ್ಕೆ ಬಾಡಿಗೆಗೆ ನೀಡಿದ್ದಾರೆ ಎಂದು Newslaundry ವರದಿ ಮಾಡಿದೆ.

ಈ ಒಪ್ಪಂದದ ದಾಖಲೆ ಪತ್ರಗಳ ಕಾರ್ಯ ಜೂನ್ 29ರಂದು ನಡೆದಿತ್ತು. ಜುಲೈ 1ರಂದು ಮುಂಬೈಯ ನೋಂದಣಿ ಕಚೇರಿಯಲ್ಲಿ ನೋಂದಣಿಯಾಯಿತು ಎಂದು ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಸುದ್ದಿ ವೆಬ್‌ಸೈಟ್ square feet india ಹೇಳಿದೆ. ಜೂನ್ 15ಕ್ಕಿಂತ ಮುನ್ನ ಚಂದ್ರ ಅವರು ಬಂಗ್ಲೆಯ ಪವರ್ ಆಫ್ ಅಟಾರ್ನಿಯನ್ನು ಭಾವು ಪಾಟೀಲ್ ಅರೋಟೆ ಅವರಿಗೆ ನೀಡಿದ್ದರು. ಅನಂತರ ಜೂನ್ 29ರಂದು ಚಂದ್ರ ಅವರ ಪರವಾಗಿ ಭಾವುಪಾಟೀಲ್ ಅರೋಟೆ ಹಾಗೂ ಚೀನಾದ ಕಾನ್ಸುಲೇಟ್ ಜನರಲ್ ಹುಯಾಂಗ್ ಕ್ಸಿಯಾಂಗ್ ನಡುವೆ ಮುಂಬೈಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.

 ದಕ್ಷಿಣ ಮುಂಬೈಯ ಕಫೆ ಪರೇಡ್‌ನ ಜಾಲಿ ಮೇಕರ್ 1ರಲ್ಲಿ ಈ ಬಂಗ್ಲೆ ಇದೆ. ಬಂಗ್ಲೆಯ ಬಾಡಿಗೆಯ ಅವಧಿ ಜುಲೈ 1ರಿಂದ ಆರಂಭವಾಗಲಿದೆ. ಬಾಡಿಗೆ ತಿಂಗಳಿಗೆ 4.90 ಲಕ್ಷ ರೂಪಾಯಿ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News