ಜಮ್ಮುಕಾಶ್ಮೀರ: 4 ಜಿ ನಿಷೇಧ ಸೆ.19ರವರೆಗೆ ವಿಸ್ತರಣೆ

Update: 2020-07-30 17:55 GMT

ಶ್ರೀನಗರ,ಜು.30: ಜಮ್ಮುಕಾಶ್ಮೀರದಲ್ಲಿ ಅಧಿಕ ವೇಗ ಸಾಮರ್ಥ್ಯದ 4ಜಿ ಇಂಟರ್‌ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಆಗಸ್ಟ್ 19ರವರೆಗೆ ವಿಸ್ತರಿಸಲಾಗಿದೆ.

ಜಮ್ಮುಕಾಶ್ಮೀರದ ಗೃಹ ಖಾತೆಯ ಮುಖ್ಯ ಕಾರ್ಯದರ್ಶಿ ಶಾಲಿನ್ ಕಾಬ್ರಾ ಅವರು ಬುಧವಾರ ಈ ಬಗ್ಗೆ ಆದೇಶವೊಂದನ್ನು ಪ್ರಕಟಿಸಿದ್ದಾರೆ. ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ಮೊದಲ ವರ್ಷಾಚರಣೆ ಹಾಗೂ ಸ್ವಾತಂತ್ರ ದಿನಾಚರಣೆ ಸಮಾಜ ವಿರೋಧಿ ಚಟುವಟಿಕೆಗಳು ಹೆಚ್ಚಳಗೊಳ್ಳುವ ಸಾಧ್ಯತೆಯಿದೆಯೆಂದು ಗುಪ್ತಚರ ಮಾಹಿತಿಗಳು ಲಭ್ಯವಾಗಿದ್ದು, ಭಾರತದ ಸಾರ್ವಭೌಮತೆ ಹಾಗೂ ಏಕತೆ, ಜಮ್ಮುಕಾಶ್ಮೀರದ ಭದ್ರತೆ ಹಾಗೂ ಸಾರ್ವಜನಿಕ ಶಿಸ್ತನ್ನು ಕಾಪಾಡುವ ದೃಷ್ಟಿಯಿಂದ ಇಂಟರ್‌ನೆಟ್ ಸೇವೆಗಳ ಮೇಲೆ ನಿರ್ಬಂಧ ವಿಧಿಸುವುದು ಅಗತ್ಯವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News