93ನೇ ವಯಸ್ಸಿನಲ್ಲಿ ಪದವಿ ಶಿಕ್ಷಣ ಪೂರೈಸಿದ ಎರಡನೇ ಜಾಗತಿಕ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಯೋಧ

Update: 2020-08-01 12:02 GMT
ಗಿಸೆಪ್ಪೆ ಪೆಟೆರ್ನೊ (Photo: Reuters)

ಹೊಸದಿಲ್ಲಿ: ಎರಡನೇ ಜಾಗತಿಕ ಮಹಾಯುದ್ಧದಲ್ಲಿ ಹೋರಾಡಿದ್ದ 96 ವರ್ಷದ ಇಟಲಿ ಸಂಜಾತ ಗಿಸೆಪ್ಪೆ ಪೆಟೆರ್ನೊ ಅವರು ತಮ್ಮ ದೇಶದ ಪಲೆರ್ಮೊ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ತತ್ವಶಾಸ್ತ್ರದಲ್ಲಿ ಉನ್ನತ ಶ್ರೇಣಿಯೊಂದಿಗೆ ಪದವಿ ಪಡೆದು ಜ್ಞಾನಾರ್ಜನೆಗೆ ಯಾವತ್ತೂ ವಯಸ್ಸು ಅಡ್ಡಿಯಾಗದು ಎಂದು ಸಾಬೀತು ಪಡಿಸಿದ್ದಾರೆ.

ಯುವಕರಾಗಿದ್ದಾಗಲೇ ಉನ್ನತ ಶಿಕ್ಷಣ ಪಡೆಯಬೇಕೆಂಬ ಅತೀವ ಉತ್ಸಾಹವಿದ್ದರೂ ಸಿಸಿಲಿ ನಗರದ ಬಡ ಕುಟುಂಬದಿಂದ ಬಂದಿದ್ದ ಅವರಿಗೆ ಶಿಕ್ಷಣ ಆಗ ಕನಸಿನ ಮಾತಾಗಿತ್ತಲ್ಲದೆ ಕೇವಲ ಮೂಲಭೂತ ಶಿಕ್ಷಣವನ್ನಷ್ಟೇ ಅವರು ಪಡೆದಿದ್ದರು.

ತಮ್ಮ 31ನೇ ವಯಸ್ಸಿನಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿದ ಅವರು 2017ರಲ್ಲಿ ಪದವಿ ಶಿಕ್ಷಣಕ್ಕಾಗಿ ದಾಖಲಾತಿ ಪಡೆದಿದ್ದರು. ಈ ಇಳಿವಯಸ್ಸಿನಲ್ಲಿಯೂ ಅವರ ಸಾಧನೆಯನ್ನು ಸಾಮಾಜಿಕ ಜಾಲತಾಣಿಗರು ಕೊಂಡಾಡಿದ್ದಾರೆ.

ಎರಡನೇ ಜಾಗತಿಕ ಮಹಾಯುದ್ಧದ ವೇಳೆ ನೌಕಾದಳದಲ್ಲಿ ಸೇವೆ ಸಲ್ಲಿಸಿದ್ದ ಅವರು ನಂತರ ರೈಲ್ವೆ ಇಲಾಖೆ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News