ಹೈಕಮಾಂಡ್ ಕ್ಷಮಿಸಿದರೆ ಬಂಡಾಯ ಶಾಸಕರನ್ನು ಸ್ವಾಗತಿಸಲು ಸಿದ್ಧ: ಅಶೋಕ್ ಗೆಹ್ಲೋಟ್

Update: 2020-08-01 13:21 GMT

 ಜೈಸಲ್ಮೇರ್: ತಮ್ಮ ಸರಕಾರ ಉರುಳಿಸಲು ನಡೆಸಲಾಗುತ್ತಿದೆಯೆನ್ನಲಾದ ಯತ್ನವನ್ನು ನಿಲ್ಲಿಸಬೇಕು ಎಂದು ಪ್ರಧಾನಿಗೆ ಮನವಿ ಮಾಡಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಹಾಗೂ ಅವರನ್ನು ಬೆಂಬಲಿಸುತ್ತಿರುವ ಬಂಡಾಯ ಶಾಸಕರನ್ನು ಮತ್ತೆ ಸ್ವಾಗತಿಸಲು ತಾವು ಮುಕ್ತ ಮನಸ್ಸು ಹೊಂದಿರುವುದಾಗಿ ತಿಳಿಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಬಂಡಾಯ ಶಾಸಕರನ್ನು ಕ್ಷಮಿಸಿದರೆ ಅವರನ್ನು ಮತ್ತೆ ಸ್ವಾಗತಿಸುವುದಾಗಿ ಅವರು ಹೇಳಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‍ಗೆ ಹೇಗೆ ಬೇಕೋ ಹಾಗೆಯೇ ನಡೆದುಕೊಳ್ಳುವುದಾಗಿ ತಿಳಿಸಿದ ಅವರು ತಮಗೆ ಮೂರು ಬಾರಿ ರಾಜಸ್ಥಾನ ಸಿಎಂ ಆಗುವುದಕ್ಕೆ ಅವಕಾಶ ನೀಡಿದ್ದಕ್ಕೆ ಪಕ್ಷಕ್ಕೆ ಧನ್ಯವಾದ ಹೇಳಿದ್ದಾರೆ.

ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಹಾಗೂ ಕೇಂದ್ರ ಗೃಹ ಸಚಿವಾಲಯ ನಮ್ಮ ರಾಜ್ಯ ಸರಕಾರದ ಬೆನ್ನು ಬಿದ್ದಿದೆ ಎಂದು ಅವರು ಆರೋಪಿಸಿದ್ದಾರೆ. ವಿಧಾನಸಭಾ ಅಧಿವೇಶನದ ಘೋಷಣೆಯಾದಂದಿನಿಂದ ಶಾಸಕರನ್ನು ಸೆಳೆಯಲು ಆಫರ್ ಮಾಡಲಾಗುತ್ತಿರುವ ದರ  ಹೆಚ್ಚಾಗಿದೆ ಎಂದು ತಮ್ಮ ಹಿಂದಿನ ಆರೋಪವನ್ನು ಗೆಹ್ಲೋಟ್ ಪುನರುಚ್ಛರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News