ಅಯೋಧ್ಯೆ: ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮ; ಪ್ರಧಾನಿ, ಭಾಗವತ್, ಆದಿತ್ಯನಾಥ್ ಪಾಲ್ಗೊಳ್ಳುವ ಸಾಧ್ಯತೆ

Update: 2020-08-01 17:54 GMT

ಹೊಸದಿಲ್ಲಿ, ಆ. 1: ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಆಗಸ್ಟ್ 5ರಂದು ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ಆಯ್ಕೆಯಾಗಿರುವವರಲ್ಲಿ ಆರ್‌ಎಸ್‌ಎಸ್ ವರಿಷ್ಠ ಮೋಹನ್ ಭಾಗವತ್, ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್, ರಾಮ ಮಂದಿರ ಟ್ರಸ್ಟ್ ಮುಖ್ಯಸ್ಥ ನೃತ್ಯ ಗೋಪಾಲ್ ದಾಸ್ ಸೇರಿದ್ದಾರೆ.

ಈ ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರೊಂದಿಗೆ ಈ ಕೆಲವು ಗಣ್ಯರು ಮಾತನಾಡಲಿದ್ದಾರೆ. ಗೃಹ ಸಚಿವ ಅಮಿತ ಶಾ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ರಾಮಮಂದಿರ ಶಿಲಾನ್ಯಾಸವನ್ನು 12.30 ಹಾಗೂ 12.40ರ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ನಿಗದಿತ ಸದಸ್ಯರು ಮಾತ್ರ ಇರಲಿದ್ದಾರೆ. ಶಿಲಾನ್ಯಾಸದ ಸಂದರ್ಭ ಕೋವಿಡ್-19 ಶಿಷ್ಟಾಚಾರ ಹಾಗೂ ಸುರಕ್ಷಿತ ಅಂತರಗಳನ್ನು ಪಾಲಿಸಲಿದ್ದೇವೆ ಎಂದು ಟ್ರಸ್ಟ್‌ನ ಸದಸ್ಯರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News