ಬ್ರಿಟನ್ ಸಂಸತ್ತಿಗೆ ಭಾರತ ಮೂಲದ ಶಿಕ್ಷಣ ತಜ್ಞ ಪ್ರೇಮ್ ಸಿಕ್ಕಾ ನಾಮಕರಣ

Update: 2020-08-02 04:27 GMT

ಲಂಡನ್: ಭಾರತೀಯ ಮೂಲದ ಶಿಕ್ಷಣ ತಜ್ಞ, ಉತ್ತರ ಇಂಗ್ಲೆಂಡ್‌ನ ಶೆಫೀಲ್ಡ್ ವಿವಿ ಅಕೌಂಟಿಂಗ್ ವಿಭಾಗದ ನಿವೃತ್ತ ಪ್ರೊ. ಪ್ರೇಮ್ ಸಿಕ್ಕಾ ಅವರನ್ನು ಬ್ರಿಟನ್ ಸಂಸತ್ತಿನ ಮೇಲ್ಮನೆಗೆ (ಹೌಸ್ ಆಫ್ ಲಾರ್ಡ್ಸ್) ನಾಮಕರಣ ಮಾಡಲಾಗಿದೆ. ಇತರ 35 ಮಂದಿ ತಜ್ಞರು ಕೂಡಾ ನಾಮಕರಣಗೊಂಡಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಸರ್ ಇಯಾನ್ ಬಾಥಂ ಮತ್ತು ಪ್ರಧಾನಿ ಬೋರಿಸ್ ಜಾನ್ಸನ್ ಅವರ ತಮ್ಮ ಹಾಗೂ ಸಂಸದ ಜೋ ಜಾನ್ಸನ್ ಅವರ ಹೆಸರೂ ಪಟ್ಟಿಯಲ್ಲಿದೆ. ಸರ್ಕಾರ ಶಿಫಾರಸ್ಸು ಮಾಡಿದ ಹೊಸ ನಾಮನಿರ್ದೇಶನ ಸದಸ್ಯರ ಪಟ್ಟಿಗೆ ರಾಣಿ ಎಲಿಜಬೆತ್-2 ಒಪ್ಪಿಗೆ ನೀಡಿದ್ದಾರೆ.

ಸಾಮಾಜಿಕ ನ್ಯಾಯ ಮತ್ತು ವಿಮೋಚನಾಕಾರಕ ಬದಲಾವಣೆಯ ಅಗತ್ಯತೆಯ ಕೂಗು ಎಲ್ಲೆಡೆಯಿಂದ ಅಂದರೆ ಸಂಸತ್ತಿನ ಒಳಗೆ ಹಾಗೂ ಹೊರಗಿನಿಂದ ಕೇಳಿಬರುತ್ತಿದೆ ಎಂದು ಪ್ರೇಮ್ ಸಿಕ್ಕಾ ಹೇಳಿದ್ದಾರೆ.

ಇಂಗ್ಲೆಂಡ್ ಪರ 102 ಟೆಸ್ಟ್ ಪಂದ್ಯಗಳನ್ನಾಡಿ 5,200 ರನ್ ಕಲೆ ಹಾಕಿದ್ದಲ್ಲದೇ 383 ವಿಕೆಟ್ ಕಿತ್ತ ಬಾಥಂ ಬ್ರೆಕ್ಸಿಟ್‌ಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News