ಸುನೀಲ್ ಛೆಟ್ರಿ ಏಶ್ಯನ್ ಕಪ್ 2019 ನೆಚ್ಚಿನ ಆಟಗಾರ

Update: 2020-08-02 06:30 GMT

ಹೊಸದಿಲ್ಲಿ: ಭಾರತದ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ 2019ರ ಎಎಫ್‌ಸಿ ಏಶ್ಯನ್ ಕಪ್ ಫುಟ್ಬಾಲ್ ನೆಚ್ಚಿನ ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

 19 ದಿನಗಳಲ್ಲಿ 5,61,856 ಮತಗಳನ್ನು ಪಡೆದು ಸುನೀಲ್ ಛೆಟ್ರಿ 2019 ಎಎಫ್‌ಸಿ ಏಶ್ಯನ್ ಕಪ್‌ನ ನೆಚ್ಚಿನ ಆಟಗಾರನಾಗಿ ಹೊರಹೊಮ್ಮಿದ್ದಾರೆ.

  ಫೈನಲ್‌ನಲ್ಲಿ ಉಜ್ಬೇಕಿಸ್ತಾನದ ಎಲ್ಡರ್ ಶೋಮುರೊಡೋವ್ ಅವರನ್ನು ಛೆಟ್ರಿ ಹಿಂದಕ್ಕೆ ತಳ್ಳಿದ್ದಾರೆ.

 ಏಶ್ಯನ್ ಫುಟ್ಬಾಲ್ ಕಾನ್ಫೆಡರೇಶನ್ ನಡೆಸಿದ ಸಮೀಕ್ಷೆಯಲ್ಲಿ ಭಾರತೀಯರು ಛೆಟ್ರಿ ಪರವಾಗಿ ಮತ ಚಲಾಯಿಸಿದ್ದಾರೆ.

 ಸುನಿಲ್ ಛೆಟ್ರಿ ಶೋಮುರೊಡೋವ್ ಅವರನ್ನು ಶೇ. 51-49 ಮತಗಳಲ್ಲಿ ಸೋಲಿಸಿದರು. ಮತದಾನದ ಆರಂಭಿಕ ಹಂತಗಳಲ್ಲಿ ಛೆಟ್ರಿ ಹಿಂದುಳಿದಿದ್ದರು.

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಆತಿಥೇಯ ಯುಎಇ ಮತ್ತು ಬಹರೈನ್ ವಿರುದ್ಧ ಸೋಲು ಅನುಭವಿಸುವ ಮೊದಲು ಭಾರತ 4-1 ಗೋಲುಗಳಿಂದ ಥಾಯ್‌ಲ್ಯಾಂಡ್ ತಂಡವನ್ನು ಸೋಲಿಸಿತು.

    

ರಾಷ್ಟ್ರೀಯ ಫುಟ್ಬಾಲ್ ತಂಡದ ಪರ 115 ಪಂದ್ಯಗಳನ್ನು ಆಡಿರುವ ಛೆಟ್ರಿ 72 ಗೋಲುಗಳನ್ನು ಗಳಿಸಿದ್ದಾರೆ. ಛೆಟ್ರಿ ಭಾರತದ ಫುಟ್ಬಾಲ್ ವೃತ್ತಿ ಬದುಕಿನಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ. ಅವರು ಜೂನ್ 12, 2005 ರಂದು ಕ್ವೆಟ್ಟಾದಲ್ಲಿ ನೆರೆಯ ಪಾಕಿಸ್ತಾನದ ವಿರುದ್ಧ ಪಾದಾರ್ಪಣೆ ಮಾಡಿದ್ದರು. ಸಕ್ರಿಯ ಫುಟ್ಬಾಲ್ ಆಟಗಾರರಲ್ಲಿ ಅವರು ಎರಡನೇ ಅತಿ ಹೆಚ್ಚು ಅಂತರ್‌ರಾಷ್ಟ್ರೀಯ ಸ್ಕೋರರ್ ಆಗಿದ್ದಾರೆ, ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಮೊದಲ ಸ್ಥಾನದಲ್ಲಿದ್ದಾರೆ. ಅರ್ಜೆಂಟೀನದ ಲಿಯೊನೆಲ್ ಮೆಸ್ಸಿ ಮೂರನೇ ಸ್ಥಾನದಲ್ಲಿದ್ದಾರೆ.

  35ರ ಹರೆಯದ ಛೆಟ್ರಿ ಅವರ ಭವಿಷ್ಯದ ಯೋಜನೆಗಳ ಬಗ್ಗೆ ನಿರಂತರವಾಗಿ ಕೇಳಲಾಗುತ್ತದೆ ಮತ್ತು ಯಾವಾಗ ಅವರು ನಿವೃತ್ತರಾಗುತ್ತಾರೆಂದು ಅಭಿಮಾನಿಗಳು ಕೇಳುತ್ತಿದ್ದಾರೆ. ‘‘ನಾನು ನನ್ನ ಫುಟ್ಬಾಲ್‌ನ್ನು ಆನಂದಿಸುತ್ತಿದ್ದೇನೆ ಮತ್ತು ಶೀಘ್ರದಲ್ಲೇ ನಿವೃತ್ತಿಯಾಗುವುದಿಲ್ಲ’’ ಎಂದು ಇತ್ತೀಚೆಗೆ ಛೆಟ್ರಿ ಸಂದರ್ಶನವೊಂದರಲ್ಲಿ ಹೇಳಿದ್ದರು.

‘‘ನನ್ನ ದೇಶಕ್ಕಾಗಿ 15 ವರ್ಷ ಆಡಿದ ಅದೃಷ್ಟ ನನ್ನದು. ಇದು ಒಂದು ಕನಸು, 3-4 ವರ್ಷಗಳು ಹೆಚ್ಚು ಮತ್ತು ಅದು (ಸುಮಾರು) 20 ವರ್ಷಗಳು ’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News