ಬ್ರಿಟಿಷ್ ಪಾರ್ಲಿಮೆಂಟ್‌ಗೆ ಇಯಾನ್ ಬೋಥಮ್ ಆಯ್ಕೆ

Update: 2020-08-02 06:38 GMT

 ಲಂಡನ್: ಲೆಜೆಂಡರಿ ಇಂಗ್ಲೆಂಡ್ ಆಲ್‌ರೌಂಡರ್ ಇಯಾನ್ ಬೋಥಮ್ ಅವರನ್ನು ಹೌಸ್ ಆಫ್ ಲಾರ್ಡ್ಸ್ ಆಫ್ ದಿ ಬ್ರಿಟಿಷ್ ಪಾರ್ಲಿಮೆಂಟ್ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.

 ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಆಗಿದ್ದ 64 ವರ್ಷದ ಬೋಥಮ್ ಅವರು ಪಾರ್ಲಿಮೆಂಟ್ ಪ್ರವೇಶಿಸಲಿರುವ 36 ಹೊಸ ಸದಸ್ಯರಾಗಿದ್ದಾರೆ.

 1977 ಮತ್ತು 1992ರ ನಡುವೆ ಇಂಗ್ಲೆಂಡ್ ಪರ 102 ಟೆಸ್ಟ್ ಪಂದ್ಯಗಳನ್ನು ಆಡಿದ ಬೋಥಮ್ ಪ್ರಮುಖ ಬ್ರೆಕ್ಸಿಟ್ ಬೆಂಬಲಿಗರಾಗಿದ್ದಾರೆ. 2011ರಲ್ಲಿ ಇಂಗ್ಲೆಂಡ್‌ನ ಮಹಿಳಾ ತಂಡದ ಮಾಜಿ ನಾಯಕಿ ರಾಚೆಲ್ ಹೆಹೋ-ಫ್ಲಿಂಟ್ ನಂತರ ಈ ಗೌರವ ಪಡೆದ ಮೊದಲ ಕ್ರಿಕೆಟರ್ ಎನಿಸಿಕೊಂಡಿದ್ದಾರೆ ಬೋಥಮ್ . ಡೇವಿಡ್ ಶೆಫರ್ಡ್, ಕಾಲಿನ್ ಕೌಡ್ರೆ ಮತ್ತು ಲಿಯರಿ ಕಾನ್‌ಸ್ಟಾಂಟೈನ್ ಈ ಮೊದಲು ಹೌಸ್ ಆಫ್ ಲಾರ್ಡ್ಸ್‌ನ ಬ್ರಿಟಿಷ್ ಪಾರ್ಲಿಮೆಂಟ್‌ನ ಸದಸ್ಯತ್ವಕ್ಕೆ ಭಾಜನರಾಗಿದ್ದರು.

  1981ರಲ್ಲಿ ಆಸ್ಟ್ರೇಲಿಯ ವಿರುದ್ಧ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡದ ಗೆಲುವಿನಲ್ಲಿ ಬೋಥಮ್ ನೆರವಾಗಿದ್ದರು.

  ನಿವೃತ್ತಿಯ ನಂತರ ಬೋಥಮ್ ಅವರು ಲ್ಯುಕೇಮಿಯಾ ಕುರಿತು ಸಂಶೋಧನೆಗಾಗಿ ಹಣವನ್ನು ಸಂಗ್ರಹಿಸುವುದು, ಕ್ರಿಕೆಟ್ ಪಂದ್ಯಗಳ ವೀಕ್ಷಕ ವಿವರಣೆ ನೀಡುವುದು ಮತ್ತು ದತ್ತಿ ಅಭಿಯಾನಗಳಲ್ಲಿ ತೊಡಗಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News