ಭಾರತದಲ್ಲಿ 17 ಲಕ್ಷ ಗಡಿ ದಾಟಿದ ಕೊರೋನ ಪ್ರಕರಣ

Update: 2020-08-02 07:29 GMT

ಹೊಸದಿಲ್ಲಿ, ಆ.2 : ಕೇವಲ ಎರಡು ದಿನಗಳ ಹಿಂದೆ 16 ಲಕ್ಷ ದಾಟಿದ್ದ ಕೊರೋನ ವೈರಸ್ ಪ್ರಕರಣ ರವಿವಾರ 17 ಲಕ್ಷ ದಾಟಿದೆ. 24 ಗಂಟೆಗಳ ಅವಧಿಯಲ್ಲಿ 54,735 ಹೊಸ ಪ್ರಕರಣ ವರದಿಯಾಗಿದ್ದು 11 ಲಕ್ಷಕ್ಕೂ ಅಧಿಕ ಜನರು ವೈರಸ್ ನಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ದೇಶದಲ್ಲೀಗ 17,50,723 ಜನರಿಗೆ ಸೋಂಕು ತಗುಲಿದೆ. ಜಾಗತಿಕವಾಗಿ 17.5 ಮಿಲಿಯನ್‍ಗೂ ಅಧಿಕ ಜನರಿಗೆ ಸೋಂಕು ಪರಿಣಾಮ ಬೀರಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಕೋವಿಡ್-19ನಿಂದ 853 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 37,364 ತಲುಪಿದೆ ಎಂದು ಸರಕಾರ ತಿಳಿಸಿದೆ. 11.45 ಲಕ್ಷಕ್ಕೂ ಅಧಿಕ ರೋಗಿಗಳು ಕೋವಿಡ್‍ನಿಂದ ಚೇತರಿಸಿಕೊಂಡಿದ್ದು ರವಿವಾರ ಬೆಳಿಗ್ಗೆ ಚೇತರಿಕೆಯ ಪ್ರಮಾಣ ಶೇ.65.43ರಷ್ಟಿತ್ತು. ಭಾರತವು ಈ ತನಕ 1,98,21,831 ಸ್ಯಾಂಪಲ್‍ಗಳನ್ನು ಪರೀಕ್ಷಿಸಿದೆ.

ಈ ವರ್ಷದ ಜನವರಿಯಲ್ಲಿ ಕೇರಳದಲ್ಲಿ ಮೊದಲ ಕೊರೋನ ಕೇಸ್ ಪತ್ತೆಯಾಗಿದ್ದು ಕೇವಲ 185 ದಿನಗಳಲ್ಲಿ ದೇಶದಲ್ಲಿ ಕೊರೋನ ಪ್ರಕರಣ ಸಂಖ್ಯೆ 17 ಲಕ್ಷ ಗಡಿ ದಾಟಿದೆ. ಭಾರತವು 110 ದಿನಗಳಲ್ಲಿ 1 ಲಕ್ಷ ಗಡಿ ದಾಟಿತ್ತು. 
ಒಟ್ಟು ಪ್ರಕರಣದ ಶೇ. 60ರಷ್ಟು ಹಾಗೂ ಒಟ್ಟು ಸಾವಿನ ಶೇ.50ರಷ್ಟು ಜುಲೈ ತಿಂಗಳೊಂದರಲ್ಲೇ ನಡೆದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News