ಜೈಲಿನಲ್ಲಿರುವ ಜಿ.ಎನ್. ಸಾಯಿಬಾಬಾ ಅವರ ತಾಯಿ ನಿಧನ

Update: 2020-08-02 08:49 GMT

ಹೊಸದಿಲ್ಲಿ, ಆ.2: ನಕ್ಸಲರ ಜೊತೆಗೆ ಸಂಬಂಧ ಇಟ್ಟುಕೊಂಡ ಆರೋಪದಲ್ಲಿ ಜೈಲಿನಲ್ಲಿರುವ ದಿಲ್ಲಿ ವಿವಿಯ ಮಾಜಿ ಪ್ರೊಫೆಸರ್ ಜಿಎನ್ ಸಾಯಿಬಾಬಾಗೆ ತನ್ನ ಅನಾರೋಗ್ಯಪೀಡಿತ ತಾಯಿಯನ್ನು ಭೇಟಿಯಾಗಲು ಬಾಂಬೆ ಹೈಕೋರ್ಟಿನ ನಾಗ್ಪುರ ಪೀಠ ಜಾಮೀನು ನಿರಾಕರಿಸಿದ ನಾಲ್ಕೇ ದಿನಗಳಲ್ಲಿ ಸಾಯಿಬಾಬಾ ಅವರ ತಾಯಿ ಹೈದರಾಬಾದ್‍ನಲ್ಲಿ ನಿಧನರಾಗಿದ್ದಾರೆ. 

"ಕ್ಯಾನ್ಸರ್ ರೋಗಿ 48 ಗಂಟೆಗಿಂತ ಹೆಚ್ಚುಸಮಯ ಬದುಕುವುದಿಲ್ಲ ಎಂದು ವೈದ್ಯರು ಹೇಳಿದ ಬಳಿಕ ಸಾಯಿಬಾಬಾರ ತಾಯಿ ಗೋಕರಕೊಂಡ ಸೂರ್ಯವತಿ(74 ವರ್ಷ)ಅವರೊಂದಿಗೆ ಸಾಯಿಬಾಬರ ವಿಡಿಯೊ ಕಾನ್ಫರೆನ್ಸ್‍ ವ್ಯವಸ್ಥೆ ಮಾಡಲು  ಕೊನೆಯ ಕ್ಷಣದ ಪ್ರಯತ್ನ ನಡೆಸಲಾಗಿತ್ತು. ಸಾಯಿಬಾಬಾರು ಇರುವ ನಾಗ್ಪುರ ಕೇಂದ್ರ ಕಾರಾಗೃಹದ ಅಧೀಕ್ಷಕ ಅನೂಪಕುಮಾರ್ ಅವರನ್ನು ಸಂಪರ್ಕಿಸಲು ನಾವು ಪ್ರಯತ್ನಿಸಿದ್ದೆವು. ಆದರೆ ಅವರು ನಮ್ಮ ಕರೆಗೆ ಸ್ಪಂದಿಸಲಿಲ್ಲ. ಸಾಯಿಬಾಬಾರ ತಾಯಿಗೆ ತನ್ನ ಮಗನನ್ನು ಕೊನೆಯ ಬಾರಿ ನೋಡುವ ಆಸೆ ನೆರವೇರಲಿಲ್ಲ'' ಎಂದು ಸಾಯಿಬಾಬಾರ ಪರ ವಕೀಲ ಆಕಾಶ್ ಸೋರ್ಡೆ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News