ಹೊಸ ಶಿಕ್ಷಣ ನೀತಿ : ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದ ಜೊತೆಗೆ ಬೆಳಗಿನ ಉಪಾಹಾರಕ್ಕೆ ಪ್ರಸ್ತಾವ

Update: 2020-08-02 10:00 GMT

ಹೊಸದಿಲ್ಲಿ, ಆ.2 : ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವಲ್ಲದೆ ಬೆಳಗ್ಗಿನ ಉಪಾಹಾರವನ್ನು ಪೂರೈಸಬೇಕು ಎಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ಪ್ರಸ್ತಾಪಿಸಿದೆ. 

ಈ ವಾರದ ಆರಂಭದಲ್ಲಿ ಕೇಂದ್ರ ಸಂಪುಟವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಮೋದಿಸಿದೆ. 

ಬೆಳಗಿನ ಸಮಯದಲ್ಲಿ ಪೌಷ್ಠಿಕಾಂಶವಿರುವ ಉಪಾಹಾರ ಸೇವಿಸುವುದರಿಂದ ಕಲಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸಬಹುದು ಎಂದು ಸಂಶೋಧನೆಗಳು ತಿಳಿಸಿವೆ. ಮಕ್ಕಳು ಬೆಳಗಿನ ಅವಧಿಯಲ್ಲಿ ಶಾಲೆಯಲ್ಲಿ ಹಸಿವಿನಿಂದ ಇದ್ದರೆ ಕಲಿಕೆಯಲ್ಲಿ ಆಸಕ್ತಿ ತೋರುವುದಿಲ್ಲ. ಹೀಗಾಗಿ ಈ ಯೋಜನೆ ಜಾರಿಗೊಳಿಸಬಹುದು ಎಂದು ತಿಳಿಸಿದೆ.

ಬಿಸಿಊಟ ಸಾಧ್ಯವಾಗದ ಸ್ಥಳಗಳಲ್ಲಿ, ಸರಳವಾದ ಆದರೆ ಪೌಷ್ಠಿಕ ಊಟ, ಬೆಲ್ಲ ಮತ್ತು ಸ್ಥಳೀಯ ಹಣ್ಣುಗಳೊಂದಿಗೆ ಬೆರೆಸಿದ ನೆಲಗಡಲೆ ಅಥವಾ ಚಾನಾವನ್ನು ಒದಗಿಸಬೇಕು ಎಂದು ಪ್ರಸ್ತಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News