ಚಂದ್ರಯಾನ ರೋವರ್ ಸುಸ್ಥಿತಿಯಲ್ಲಿ: ಚೆನ್ನೈ ತಂತ್ರಜ್ಞ ಪ್ರತಿಪಾದನೆ

Update: 2020-08-02 09:57 GMT
Photo: Twitter(@Ramanean)
 

ಚೆನ್ನೈ: ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆಯ ರೋವರ್ ಇನ್ನೂ ಸುಸ್ಥಿತಿಯಲ್ಲಿದೆ ಎಂದು ಚೆನ್ನೈ ಟೆಕ್ಕಿಯೊಬ್ಬರು ಪ್ರತಿಪಾದಿಸಿದ್ದಾರೆ. ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ ಮಿಷನ್‍ನ ರೋವರ್ ಚಂದ್ರನ ಮೇಲ್ಮೈನಲ್ಲಿದ್ದು, ಕೆಲ ಮೀಟರ್‍ಗಳಷ್ಟು ಚಲಿಸಿದೆ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ಚಂದ್ರಯಾನ-2 ಮಿಷನ್‍ನಡಿ ಬಾಹ್ಯಾಕಾಶ ವಾಹನವನ್ನು ಹಾರಿಬಿಡಲಾಗಿತ್ತು. ಇದರಲ್ಲಿ ಲ್ಯಾಂಡರ್ ವಿಕ್ರಮ್ ಹಾಗೂ ಪ್ರಜ್ಞಾನ್ ಎಂಬ ರೋವರ್ ಇದೆ. ಪ್ರಜ್ಞಾನ್ ಎಂದರೆ ಸಂಸ್ಕೃತದಲ್ಲಿ ಜ್ಞಾನ ಎಂಬ ಅರ್ಥ.

ಟೆಕ್ಕಿ ಷಣ್ಮುಗ ಸುಬ್ರಹ್ಮಣ್ಯ ಅವರು ಟ್ವಿಟ್ಟರ್ ನಲ್ಲಿ ಸರಣಿ ಚಿತ್ರಗಳನ್ನು ಪೋಸ್ಟ್ ಮಾಡಿ, ಪ್ರಜ್ಞಾನ್ ಸುಸ್ಥಿತಿಯಲ್ಲಿದೆ ಎಂದು ಪ್ರತಿಪಾದಿಸಿದ್ದಾರೆ. ಕಠಿಣ ಲ್ಯಾಂಡಿಂಗ್‍ನಿಂದಾಗಿ ಪೇಲೋಡ್ ಛಿದ್ರಗೊಂಡು, ಅವಶೇಷಗಳು ಸಿಕ್ಕ ಸ್ಥಳದಿಂದ ಕೆಲ ಮೀಟರ್ ದೂರ ಇದು ಚಲಿಸಿದೆ ಎಂದೂ ಅವರು ಹೇಳಿದ್ದಾರೆ.
ಈ ಹಿಂದೆ ನಾಸಾ ಚಿತ್ರಗಳನ್ನು ಬಳಸಿಕೊಂಡು ವಿಕ್ರಮ್‍ನ ಅವಶೇಷಗಳನ್ನು ಇವರು ಮೊದಲು ಪತ್ತೆ ಮಾಡಿದ್ದರು. ಈ ಬಾರಿ ಕೂಡಾ ತಮ್ಮ ಪ್ರತಿಪಾದನೆಯ ಪುರಾವೆಯಾಗಿ ನಾಸಾ ಚಿತ್ರಗಳನ್ನು ಬಳಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News