ಎಸ್ಕೆಎಸ್ಸೆಸ್ಸೆಫ್ ಮಿತ್ತಬೈಲ್ ಕ್ಲಸ್ಟರ್ ವತಿಯಿಂದ ಶ್ರಮದಾನ

Update: 2020-08-02 17:15 GMT

ಬಂಟ್ವಾಳ, ಆ. 2: ಕೊರೋನ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಸ್ಕೆಎಸ್ಸೆಸ್ಸೆಫ್ ಮಿತ್ತಬೈಲ್ ಕ್ಲಸ್ಟರ್ ವತಿಯಿಂದ ರವಿವಾರ ಬಿ.ಸಿ.ರೋಡ್ ವ್ಯಾಪ್ತಿಯಲ್ಲಿರುವ ಮಸೀದಿಗಳು, ದೇವಸ್ಥಾನಗಳು, ಪೊಲೀಸ್ ಠಾಣೆ, ಮಿನಿ ವಿಧಾನ ಸೌಧ, ಇಂದಿರಾ ಕ್ಯಾಂಟೀನ್, ಸರಕಾರಿ ಬಸ್ ನಿಲ್ದಾಣ ಹಾಗೂ ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸರ್ ಸಿಂಪಡಿಸಲಾಯಿತು. 

ಬಿ.ಸಿ‌‌.ರೋಡ್, ಶಾಂತಿ ಅಂಗಡಿ, ಪಲ್ಲಮಜಲ್, ತಾಳಿಪಡ್ಪು, ಪರ್ಲ್ಯ, ನಂದರಬಿಟ್ಟು ಹಾಗೂ ತುಂಬೆಯಲ್ಲಿ ಸ್ಯಾನಿಟೈಸರ್ ಸಿಂಪಡಿಸುವ ಮೂಲಕ ಕೊರೋನ ಬಗ್ಗೆ ಜಾಗೃತಿ ಮೂಡಿಸಲಾಯಿತು‌. 

ಅಲ್ಲದೆ ಸಂಘಟನೆಯ ಕಾರ್ಯಕರ್ತರು ಬಿ.ಸಿ.ರೋಡ್ ಮೇಲ್ಸೇತುವೆಯ ಮೇಲ್ಬಾಗದ ಎರಡು ಬದಿಯಲ್ಲಿ ತುಂಬಿದ್ದ ಮರಳು, ಮಣ್ಣನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಸೇತುವೆಯಲ್ಲಿ ಮರಳು ಮಣ್ಣು ತುಂಬಿದ್ದರಿಂದ ಮಳೆ ನೀರು ಸರಾಗವಾಗಿ ಹರಿಯದೆ ಸಮಸ್ಯೆ ಉಂಟಾಗುತ್ತಿತ್ತು. ಮೇಲ್ಸೇತುವೆಯಲ್ಲಿ ವಾಹನಗಳು ಸಂಚರಿಸುವಾಗ ಸೇತುವೆಯ ಕೆಳಗೆ ನಡೆದುಕೊಂಡುವ ಹೋಗುವ ಜನರ ಮೇಲೆ ನೀರು ಎರಚುತ್ತಿತ್ತು. ಈ ಬಗ್ಗೆ ಬಂಟ್ವಾಳ ಪೊಲೀಸರ ಮನವಿಯಂತೆ ಶ್ರಮ ದಾನ ನಡೆಸಿ ಮರಳು ಮಣ್ಣು ತೆರವುಗೊಳಿಸಲಾಯಿತು. 

ಈ ಸಂದರ್ಭದಲ್ಲಿ ಎಸ್ಕೆಎಸ್ಸೆಸ್ಸೆಫ್ ಮಿತ್ತಬೈಲ್ ಕ್ಲಸ್ಟರ್ ಅಧ್ಯಕ್ಷ ಅಶ್ರಫ್ ಶಾಂತಿ ಅಂಗಡಿ, ಮಿತ್ತಬೈಲ್ ಕ್ಲಸ್ಟರ್ ವಿಖಾಯ ಕನ್ವಿನರ್ ಶಾಫಿ, ವಿಖಾಯ ಕೇಂದ್ರ ಸಮಿತಿಯ ವೈಸ್ ಚೇಯರ್ಮಾನ್ ಬಶೀರ್ ಮಜಲ್, ಮಿತ್ತಬೈಲ್ ಕೇಂದ್ರ ಮಸೀದಿಯ ಸದಸ್ಯರು, ಕ್ಲಸ್ಟರ್ ವ್ಯಾಪ್ತಿಯ ಶಾಖೆಗಳ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News