ಕೊರೆಗಾಂವ್-ಭೀಮಾ ಯುದ್ಧದ ಬಗ್ಗೆ ಸಿನೆಮಾ: ನಿವೃತ್ತ ಐಎಎಸ್ ಅಧಿಕಾರಿ ಹೇಳಿಕೆ

Update: 2020-08-02 17:23 GMT

ಭೋಪಾಲ, ಆ.2: 1818ರಲ್ಲಿ ನಡೆದಿದ್ದ ಕೊರೆಗಾಂವ್-ಭೀಮಾ ಯುದ್ಧದ ಬಗ್ಗೆ ತಾನು ಸಿನೆಮ ಮಾಡುವುದಾಗಿ ಮಧ್ಯಪ್ರದೇಶದ ನಿವೃತ್ತ ಐಎಎಸ್ ಅಧಿಕಾರಿ ಹೇಳಿದ್ದಾರೆ.

1818ರ ಜನವರಿ 1ರಂದು ಈಸ್ಟ್ ಇಂಡಿಯಾ ಕಂಪೆನಿಯ ಮಹಾರ್ ಸೈನಿಕರು ಹಾಗೂ ಪೇಶ್ವೆಯ ಸೇನೆಯ ಮಧ್ಯೆ ಈ ಯುದ್ಧ ನಡೆದಿದ್ದು ದಲಿತರ ಶೌರ್ಯ, ಸಾಹಸ ಮತ್ತು ವಿಮೋಚನೆಯ ದ್ಯೋತಕವಾಗಿ ಈ ಯುದ್ಧ ಜಾನಪದದಲ್ಲಿ ಬಿಂಬಿತವಾಗಿದೆ.

  ಆ ಸಮಯದಲ್ಲಿ ದಲಿತರನ್ನು ಯಾವ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿತ್ತು ಎಂಬುದನ್ನು ಸಿನೆಮ ತೋರಿಸಲಿದೆ. ಸುಮಾರು 2,500 ಜನ ಈ ಸಿನೆಮಾಕ್ಕೆ ಬಂಡವಾಳ ಹೂಡಿದ್ದಾರೆ. ತಾನು ಕೂಡಾ ಒಂದು ಪಾತ್ರದಲ್ಲಿ ಅಭಿನಯಿಸಿದ್ದೇನೆ ಎಂದು ನಿವೃತ್ತ ಅಧಿಕಾರಿ ರಮೇಶ್ ಥೆಟೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News