ಮಂಗಳೂರು: ಐ ಝೋನ್ ಆಪ್ಟಿಕಲ್‌ನ 2ನೆ ಮಳಿಗೆ ಶುಭಾರಂಭ

Update: 2020-08-03 06:53 GMT

ಮಂಗಳೂರು, ಆ.3: ಕಂಕನಾಡಿ ಬೈಪಾಸ್ ರಸ್ತೆಯಲ್ಲಿರುವ ವಿಶ್ವಾಸ್ ಕ್ರೌನ್ ಬಿಲ್ಡಿಂಗ್‌ನಲ್ಲಿ ‘ಐ ಝೋನ್ ಆಪ್ಟಿಕಲ್’ನ 2ನೆ ಮಳಿಗೆಯನ್ನು  ಮೇಯರ್ ದಿವಾಕರ ಪಾಂಡೇಶ್ವರ ಉದ್ಘಾಟಿಸಿದರು.

ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಮೊಯ್ದಿನ್ ಬಾವ, ವಿಶ್ವಾಸ್ ಬಾವಾ ಬಿಲ್ಡರ್ಸ್‌ನ ಆಡಳಿತ ನಿರ್ದೇಶಕರಾದ ಅಬ್ದುಲ್ ರವೂಫ್ ಪುತ್ತಿಗೆ, ದಾಯ್ಜಿವರ್ಲ್ಡ್ ಮೀಡಿಯಾ ಗ್ರೂಪ್‌ನ ಸಂಸ್ಥಾಪಕ ವಾಲ್ಟರ್ ನಂದಳಿಕೆ, ಮುಮ್ತಾಝ್ ಅಲಿ, ಶೇಖಬ್ಬ, ಅಬ್ದುಲ್ ರಹ್ಮಾನ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಶುಭ ಕೋರಿದರು.

ರಿಫ್ರೆಕ್ಟೊಮೀಟರ್, ಲೆನ್ಸೋಮೀಟರ್, ಯುವಿ ಟೆಸ್ಟರ್, ಫೋಟೋ ಗ್ರೇ ಟೆಸ್ಟರ್ ಮೊದಲಾದ ಸುಸಜ್ಜಿತ ಉಪಕರಣಗಳನ್ನು ಹೊಂದಿರುವ ಮಳಿಗೆಯಲ್ಲಿ ಲೆನ್ಸೋಮೀಟರ್ ಮೂಲಕ ಕಂಪ್ಯೂಟರೀಕೃತ ಕಣ್ಣಿನ ತಪಾಸಣೆ ಉಚಿತವಾಗಿರುತ್ತದೆ. ಮಳಿಗೆಯಲ್ಲಿ ಅನುಭವಿ ಆಪ್ಟೋಮೆಟ್ರಿಸ್ಟ್ ಮತ್ತು ಮಾರಾಟ ಪ್ರತಿನಿಧಿಗಳಿದ್ದು ಸಹಕರಿಸಲಿದ್ದಾರೆ.

ಎಲ್ಲಾ ಪ್ರಮುಖ ಬ್ರಾಂಡ್‌ಗಳ ಲೆನ್ಸ್‌ಗಳು ಮತ್ತು ಫ್ರೇಮ್‌ಗಳು ಲಭ್ಯವಿದ್ದು, ವಿವಿಧ ಬಣ್ಣ ಹಾಗೂ ಸ್ಪಷ್ಟ ಕಾಂಟಾಕ್ಟ್ ಲೆನ್ಸ್ ‌ಗಳೂ ಮಳಿಗೆಯಲ್ಲಿವೆ. ವಿವಿಧ ನಮೂನೆ ಹಾಗೂ ವಿನ್ಯಾಸದ ಸನ್‌ಗ್ಲಾಸ್‌ಗಳೂ ಕೂಡಾ ಇಲ್ಲಿ ಲಭ್ಯ. ಐ ಝೋನ್ ಈಗಾಗಲೇ ಸಿಟಿ ಸೆಂಟರ್ ಮಾಲ್‌ನ ಸ್ಪಾರ್ ಸೂಪರ್ ಮಾರ್ಕೆಟ್‌ನ ಎದುರು ಪ್ರಥಮ ಮಳಿಗೆಯನ್ನು ಹೊಂದಿದ್ದು, ಇದು ಎರಡನೆಯ ಮಳಿಗೆಯಾಗಿದೆ ಎಂದು ಮಳಿಗೆಯ ಆಡಳಿತ ಪಾಲುದಾರರಾದ ಮುಹಮ್ಮದ್ ರಫೀಕ್ ಕೃಷ್ಣಾಪುರ ಹಾಗೂ ಬಿಸ್ನೆಸ್ ಡೆವಲಪರ್ ಅಬ್ದುಲ್ ನಾಸಿರ್ ಚಾಬು ಕುದ್ರೋಳಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News