ಆ. 5: ಮಂಗಳೂರಿನ ವಿವಿಧೆಡೆ ವಿದ್ಯುತ್ ನಿಲುಗಡೆ

Update: 2020-08-03 15:05 GMT

ಮಂಗಳೂರು, ಆ.3: ಎಂಎಸ್‌ಇಝೆಡ್ ಹಾಗೂ ಬಿಜೈ ಉಪಕೇಂದ್ರದಿಂದ ಹೊರಡುವ ವಿವಿಧ ಫೀಡರ್‌ಗಳಲ್ಲಿ ಜಂಪರ್ ಬದಲಾವಣೆ, ಜಿಒಎಸ್ ದುರಸ್ತಿ, ಜಂಗಲ್ ಕಟ್ಟಿಂಗ್ ಸಹಿತ ಇತರ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿದ್ದು, ಆ.5ರಂದು ಬೆಳಗ್ಗೆಯಿಂದ ಸಂಜೆವರೆಗೆ ತಾಲೂಕಿನ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗುವ ಸಾಧ್ಯತೆ ಇದೆ.

ಈಶ್ವರಕಟ್ಟೆ/ಪೆರಾರ/ಸುಂಕದಕಟ್ಟೆ: ಆ.5ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ 220/110/11ಕೆವಿ ಎಂಎಸ್‌ಇಝೆಡ್ ಉಪ ಕೇಂದ್ರದಿಂದ ಹೊರಡುವ 11ಕೆವಿ ಈಶ್ವರಕಟ್ಟೆ, ಪೆರಾರ ಮತ್ತು ಸುಂಕದಕಟ್ಟೆ ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿದೆ.

ಇದರಿಂದ ಈಶ್ವರಕಟ್ಟೆ, ವಿಒಆರ್ ರೋಡ್, ಮುರ, ಶಾಸ್ತಾವು, ಹೊಯ್ಗೆಪದವು, ನಾಗಬ್ರಹ್ಮ, ಸುರಭಿಕಟ್ಟೆ, ಎರಮೆ, ಕೊಂಚಾರು, ಶಾಂತಿಗುಡ್ಡೆ, ಕೊಂಪದವು, ಮೂಡುಪೆರಾರ, ಮಂಜನಕಟ್ಟೆ, ಪೂಮಾರಪದವು, ಅರಿಕೆ ಪದವು, ಗಣೇಶನಗರ, ಜರಿನಗರ, ಅಂಬಿಕಾನಗರ, ಮುರನಗರ, ಸೌಹಾರ್ದನಗರ, ಸಿದ್ಧಾರ್ಥನಗರ, ಪಡುಪೆರಾರ, ಕತ್ತಲ್‌ಸಾರ್, ಕರಂಬಾರು, ತಳಕಳ ಏರಿಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗುವ ಸಾಧ್ಯತೆ ಇದೆ.

ಬಿಜೈ: ಆ.5ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ 110/33/11 ಕೆವಿ ಬಿಜೈ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಬಿಜೈ ಫೀಡರ್‌ನಲ್ಲಿ ನಿರ್ವಹಣಾ ಕಾಮಗಾರಿ ನಡೆಯುತ್ತಿದ್ದು, ಕೆಎಸ್ಸಾರ್ಟಿಸಿ ಎದುರುಗಡೆ, ಬಿಜೈ ಮುಖ್ಯರಸ್ತೆ, ಬಿಜೈ ಹೊಸ ರಸ್ತೆ, ಆನೆಗುಂಡಿ, ಸಂಕೈಗುಡ್ಡ, ಎಂಸಿಎಫ್ ಕಾಲನಿ, ಗ್ಯಾಸ್ ಗೋಡೌನ್, ಬಿಜೈ ಚರ್ಚ್ ರಸ್ತೆ, ಬಿಜೈ ಮ್ಯೂಸಿಯಂ, ಬಟ್ಟಗುಡ್ಡ, ರಾಮಕೃಷ್ಣ ಭಜನಾ ಮಂದಿರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಲುಗಡೆ ಸಾಧ್ಯತೆ ಇದೆ. ಸಂಬಂಧಪಟ್ಟ ಗ್ರಾಹಕರು ಮೆಸ್ಕಾಂನೊಂದಿಗೆ ಸಹಕರಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News