​ಪಡುಬಿದ್ರಿ ಬೀಚ್‌ನಲ್ಲಿ 10 ಮಂದಿಗೆ ಕೊರೋನ ಸೋಂಕು

Update: 2020-08-03 15:20 GMT

ಪಡುಬಿದ್ರಿ, ಆ.3: ಇಲ್ಲಿನ ಪಡುಬಿದ್ರಿ ಬೀಚ್ ಪರಿಸರದಲ್ಲಿ ಸೋಮವಾರ ಒಟ್ಟು 10 ಮಂದಿ ಪುರುಷರಿಗೆ ಕೊರೋನ ಸೋಂಕು ದೃಢಪಟ್ಟಿದೆ. ಇದರಿಂದ ಬೀಚ್ ಪ್ರದೇಶ ಹೊರಗಿನ ಜನರ ಪ್ರವೇಶಕ್ಕೆ ನಿರ್ಬಂಧಿತವಾಗಿದೆ.

ಈ ಭಾಗದ ಜನರಿಗೆ ನಡೆಸಿದ ರ್ಯಾಂಡಮ್ ಪರೀಕ್ಷೆಯ ವೇಳೆಗೆ ಬೀಚ್ ಪರಿಸರದ 62, 50, 43, 28, 55, 43, 62, 48, 49 ಮತ್ತು 53 ವರ್ಷಗಳ ಪುರುಷರು ಕೋವಿಡ್ ಸೋಂಕಿಗೆ ಪಾಸಿಟಿವ್ ಆಗಿದ್ದಾರೆ ಎಂದು ತಿಳಿದು ಬಂದಿದೆ.

ಕೆಲ ದಿನಗಳ ಹಿಂದೆ ಇಲ್ಲಿನ 55 ವರ್ಷ ಪ್ರಾಯದ ಪುರುಷರೊಬ್ಬರು ಡೆಂಗ್ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ತೆರಳಿದ್ದಾಗ ಮೃತಪಟ್ಟಿದ್ದರು. ಅನಂತರ ನಡೆಸಿದ ಅವರ ಗಂಟಲು ಸ್ರಾವ ಪರೀಕ್ಷೆಯಲ್ಲಿ ಕೊರೊನಾ ಸೋಂಕು ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಸಂಪರ್ಕವಿದ್ದ ಸುಮಾರು 30 ಮಂದಿಯನ್ನು ರ್ಯಾಂಡಮ್ ಪರೀಕ್ಷೆಗೊಳಪಡಿಸಲಾಗಿತ್ತು.

ಈ ಪೈಕಿ ಜ್ವರ ಲಕ್ಷಣವಿದ್ದ ಮೂವರಿಗೆ ಈ ಮೊದಲೇ ಕೊರೊನಾ ಸೋಂಕು ದೃಢಪಟ್ಟಿತ್ತು. ಉಳಿದವರ ಪೈಕಿ ಸೋಮವಾರ 10 ಮಂದಿಗೆ ಸೋಂಕು ದೃಢ ಪಟ್ಟಿದೆ. ಇವರಿಗೆ ಯಾವುದೇ ರೋಗ ಲಕ್ಷಣಗಳಿಲ್ಲದ ಕಾರಣ ಹೋಮ್ ಐಸೋಲೇಶನ್‌ನಲ್ಲಿ ಇರಿಸಲಾಗಿದೆ. ಇವರೆಲ್ಲರೂ ಒಂದೇ ಪರಿಸರದಲ್ಲಿ ವಾಸವಿರುವ ಕಾರಣ ಇಡೀ ಪರಿಸರವನ್ನು ಕಂಟೈನ್‌ಮೆಂಟ್ ವಲಯವನ್ನಾಗಿ ಪರಿವರ್ತಿಸುವ ಸಾಧ್ಯತೆ ಇದೆ.

ಬೀಚ್‌ಗೆ ಯಾರೂ ಬರಬೇಡಿ: ಪಡುಬಿದ್ರಿಯ ಬೀಚ್ ಪರಿಸರದ ಕಾಡಿಪಟ್ನ, ನಡಿಪಟ್ನ ಸೇರಿದಂತೆ ಬೀಚ್ ರಸ್ತೆಯ ಪ್ರದೇಶಗಳಲ್ಲಿ ಕೋವಿಡ್-19 ಕಾಣಿಸಿಕೊಳ್ಳುತಿದ್ದು, ಈ ನಿಟ್ಟಿನಲ್ಲಿ ಈ ಪರಿಸರಕ್ಕೆ ಯಾವುದೇ ಕಾರಣವಿಲ್ಲದೆ ಯಾರೂ ಬರಬೇಡಿ ಎಂದು ಪರಿಸರದ ಮಂದಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪಡುಬಿದ್ರಿಯ ಬೀಚ್ ಪರಿಸರದ ಕಾಡಿಪಟ್ನ, ನಡಿಪಟ್ನ ಸೇರಿದಂತೆ ಬೀಚ್ ರಸ್ತೆಯ ಪ್ರದೇಶಗಳಲ್ಲಿ ಕೋವಿಡ್-19 ಕಾಣಿಸಿಕೊಳ್ಳುತಿದ್ದು, ಈ ನಿಟ್ಟಿನಲ್ಲಿ ಈ ಪರಿಸರಕ್ಕೆ ಯಾವುದೇ ಕಾರಣವಿಲ್ಲದೆ ಯಾರೂ ಬರಬೇಡಿ ಎಂದು ಪರಿಸರದ ಮಂದಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ನಿಮ್ಮ ಕುಟುಂಬ ಸಂಸಾರ ಬಂಧು ಬಳಗವನ್ನು ಕರೆದುಕೊಂಡು ಬೀಚ್ ವಿಹರಿಸಲು ಬರಬೇಡಿ. ಅಗತ್ಯವಿದ್ದಲ್ಲಿ ಮಾತ್ರ ಆಗಮಿಸಿ ಮತ್ತು ಬರುವಾಗ ಮಾಸ್ಕ್ ಧರಿಸಿ. ನಿಮ್ಮ ಹುಟ್ಟುಹಬ್ಬವನ್ನು ದಯವಿಟ್ಟು ನಿಮ್ಮ ಮನೆಯಲ್ಲೇ ಆಚರಿಸಿಕೊಳ್ಳಿ ಎಂದು ಅವರು ಹೇಳಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಈ ಪ್ರದೇಶದಲ್ಲಿ ಪ್ರವಾಸಿಗರು ಯಾವುದೇ ಮುಂಜಾಗೃತೆ ವಹಿಸದೆ ಓಡಾಡುವ ಬಗ್ಗೆ ಪಡುಬಿದ್ರಿ ಪೊಲೀಸ್ ಸ್ಟೇಷನ್‌ಗೆ ಪಡುಬಿದ್ರಿ ಗ್ರಾಮ ಪಂಚಾಯಿತಿಗೂ ಮನವಿ ಸಲ್ಲಿಸಿದ್ದೇವೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವ ಬಗ್ಗೆ ಅವರು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News