ಸಾಬರಕಟ್ಟೆಯ ಒಂದು ಮನೆ ನಾಲ್ವರಲ್ಲಿ ಕೊರೋನ ಪಾಸಿಟಿವ್

Update: 2020-08-03 15:23 GMT

ಕುಂದಾಪುರ/ಉಡುಪಿ, ಆ.3: ಸಾಬರಕಟ್ಟೆಯ ಕಲ್ಲುಕೋರೆಯಲ್ಲಿ ಕೆಲಸ ಮಾಡುವ ಒಂದೇ ಮನೆಯ ನಾಲ್ವರಲ್ಲಿ ಇಂದು ಕೊರೋನ ಪಾಸಿಟಿವ್ ಕಾಣಿಸಿಕೊಂಡಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ಕೋಟದ ಆರ್‌ಐ ರಾಜು ತಿಳಿಸಿದ್ದಾರೆ.

ಉಳಿದಂತೆ ಕೋಟ ಹೋಬಳಿಯ ಕೋಟದಲ್ಲಿ 5, ಆವರ್ಸೆಯಲ್ಲಿ 3, ಹಿಲಿಯಾಣದಲ್ಲಿ 2, ಸಾಲಿಗ್ರಾಮದಲ್ಲಿ 1 ಹಾಗೂ ಬಾರಕೂರು ಹನೆಹಳ್ಳಿಯ ಇಬ್ಬರಲ್ಲಿ ಪಾಸಿಟಿವ್ ಕಾಣಿಸಿಕೊಂಡಿ.ಕೋಟದಲ್ಲಿ ಗೇರುಬೀಜ ಕಾರ್ಖಾನೆಯ ಇಬ್ಬರು, ಆವರ್ಸೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಿ ವರ್ಗದ ನೌಕರ ಸೇರಿದಂತೆ ಮೂವರಲ್ಲಿ ಪಾಸಿಟಿವ್ ಕಂಡುಬಂದಿದೆ. ಹೆಚ್ಚಿನವರು ಶೀತ- ಜ್ವರದ ಸಮಸ್ಯೆಗಾಗಿ ಪರೀಕ್ಷೆಗೆ ಹೋಗಿದ್ದು, ಎಲ್ಲರೂ ಪಾಸಿಟಿವ್ ಆಗಿದ್ದಾರೆ ಎಂದು ಅವರು ತಿಳಿಸಿದರು.

ಬ್ರಹ್ಮಾವರ ಹೋಬಳಿಯಲ್ಲಿ ವಾರಂಬಳ್ಳಿ, ಚಾಂತಾರು ಹಾಗೂ ನೀಲಾವರ ಗಳಲ್ಲಿ ತಲಾ ಒಂದು ಪಾಸಿಟಿವ್ ಕಂಡುಬಂದಿದೆ. ವಾರಂಬಳ್ಳಿಯ ಇಂದಿರಾ ನಗರದ ನಿವಾಸಿ ಉಡುಪಿಯ ಮಾಲ್ ಒಂದರ ಉದ್ಯೋಗಿ 29ರ ಹರೆಯದ ಯುವಕನಿಗೆ, ಚಾಂತಾರಿನ 60 ವರ್ಷದ ವೃದ್ದೆಗೆ ಹಾಗೂ ನೀಲಾವರದ 23ರ ಹರೆಯ ರಿಕ್ಷಾ ಚಾಲಕ ಯುವಕನಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಇಲ್ಲಿ ಒಟ್ಟು 10 ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ತಹಶೀಲ್ದಾರ್ ಕಿರಣ್ ಗೋರಯ್ಯ ತಿಳಿಸಿದ್ದಾರೆ.

ಬೈಂದೂರಿನಲ್ಲಿ 28: ಬೈಂದೂರು ತಾಲೂಕಿನಲ್ಲಿ ಇಂದು 20 ಮನೆಯ 28 ಮಂದಿಗೆ ಪಾಸಿಟಿವ್ ಬಂದಿವೆ. ಶಿರೂರು 1, ತೆಗ್ಗರ್ಸೆ 1, ಕಾಲ್ತೋಡು 1 (ಇಬ್ಬರಿಗೆ), ಕೆರ್ಗಾಲು 1, ನಾವುಂದ 2, ಯಡ್ತರೆ 1(3), ಬಡಾಕೆರೆ 3(5), ಪಡುವರಿ 1(1), 11ನೇಉಳ್ಳೂರು 1, ನಾಡ 7 (10) ಹಾಗೂ ಹಡವು 1 ಪಾಸಿಟಿವ್ ಬಂದ ಗ್ರಾಮವಾಗಿದೆ. ಕುಂದಾಪುರ ತಾಲೂಕಿನಲ್ಲಿ ಇಂದು ಒಟ್ಟು 40 ಕೇಸುಗಳು ವರದಿಯಾಗಿವೆ ಎಂದು ತಿಳಿದು ಬಂದಿದೆ.

ಉಡುಪಿಯಲ್ಲಿ 26: ಉಡುಪಿ ತಾಲೂಕಿನ ಶಿವಳ್ಳಿ-6, ಕೊಡವೂರು-6, ಅಲೆವೂರು-3, 80 ಬಡಗುಬೆಟ್ಟು-2, ಬೊಮ್ಮರಬೆಟ್ಟು-2, ಅಂಜಾರು-2, ಬೈರಂಪಳ್ಳಿ, ಪಡುತೋನ್ಸೆ, ಮೂಡುತೋನ್ಸೆ, ಕಡೆಕಾರು, ಪೆರ್ಡೂರುಗಳಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ ಎಂದು ತಾಲೂಕು ಕಚೇರಿ ಯಿಂದ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News