ಕೊರೋನ : ಜೀವ-ಜೀವನ ಮಾಹಿತಿ ಕಾರ್ಯಕ್ರಮ

Update: 2020-08-03 16:03 GMT

ಉಡುಪಿ, ಆ.3: ಜನ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿದ ಕೊರೋನಾ ಮಹಾಮಾರಿಯಿಂದ ರಕ್ಷಣೆ ಮಾಡಿಕೊಂಡು ಜೀವನವನ್ನು ನಡೆಸುವುದು ಅನಿವಾರ್ಯವಾಗಿದೆ. ಜನರು ಭಯಭೀತರಾಗದೇ ರೋಗದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಕೊರೋನಾ ಪೀಡಿತರು ಅಥವಾ ಸೀಲ್‌ಡೌನ್ ಆದ ಪ್ರದೇಶದ ಜನರನ್ನು ಕೀಳಾಗಿ ಕಾಣದೇ ಅವರಲ್ಲಿ ದೈರ್ಯ ತುಂಬುವ ಕಾರ್ಯ ಮಾಡಬೇಕು ಎಂದು ವಿಕಲಚೇತನ ಕಲ್ಯಾಣ ಇಲಾಖೆಯ ತಾಲೂಕು ಸಂಯೋಜ ಮಧುಸೂದನ್ ರಾವ್ ಹೇಳಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವ ಸ್ಪಂದನ ಕೇಂದ್ರದ ಗ್ರಾಮೀಣ ಭಾಗವಾದ ಕುಂಜಾರುಗಿರಿಯ ನಿನ್ನಿ ಪಾದೆ ವಠಾರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕೊರೋನಾ-ಜೀವ ಮತ್ತು ಜೀವನ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ ಜನರಲ್ಲಿ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಕೊರೋನಾ ಎಚ್ಚರಿಕೆಯ ಕರಪತ್ರವನ್ನು ಹಂಚಲಾಯಿತು. ಕಾರ್ಯಕ್ರಮ ದಲ್ಲಿ ಯುವ ಸ್ಪಂದನ ಕೇಂದ್ರದ ಯುವ ಪರಿವರ್ತಕ ಪಾರ್ಥಸಾರಥಿ ಕುಂಜಾರುಗಿರಿ, ರಂಗನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News