ಬ್ಯಾರಿ ಮಹಿಳಾ ಬರಹಗಾರರಿಂದ ಕಥೆ-ಲೇಖನ-ಕವನಕ್ಕೆ ಆಹ್ವಾನ

Update: 2020-08-03 16:41 GMT

ಮಂಗಳೂರು, ಆ.3: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಬ್ಯಾರಿ ಮಹಿಳಾ ಬರಹಗಾರ್ತಿಯರನ್ನು ಪ್ರೋತ್ಸಾಹಿಸಲು ‘ಬ್ಯಾರಿ ‘ಪೆನ್ನೆ’ಲ್ತ್’ ಬ್ಯಾರಿ ಮಹಿಳೆಯರ ಕತೆ-ಲೇಖನ-ಕವನಗಳ ಸಮುಚ್ಚಯ ಹೊರತರಲು ನಿರ್ಧರಿಸಿದ್ದು, ಬ್ಯಾರಿ ಬರಹಗಾರ್ತಿಯರಿಂದ ಕತೆ, ಲೇಖನ, ಕವನಗಳನ್ನು ಆಹ್ವಾನಿಸಿದೆ.

ಒಬ್ಬರಿಂದ ಒಂದೊಂದು ಕತೆ, ಕವನ, ಲೇಖನಗಳನ್ನು ಕಳುಹಿಸಲು ಅವಕಾಶವಿದೆ. ಪ್ರಕಟಣೆಗೆ ಯೋಗ್ಯವಾದ ಬರಹಗಳನ್ನು ಮಾತ್ರ ಪುಸ್ತಕದಲ್ಲಿ ಪ್ರಕಟಿಸಲಾಗುವುದು. ಪ್ರಕಟಿತ ಬರಹಗಳಿಗೆ ಗೌರವಾರ್ಥವಾಗಿ ಮೂರು ಪುಸ್ತಕಗಳನ್ನು ನೀಡಲಾಗುವುದು. ಆ.20ರೊಳಗೆ ಲೇಖನಗಳನ್ನು ಕಳುಹಿಸಬಹುದಾಗಿದೆ.

ಬರಹಗಳನ್ನು ಕಳುಹಿಸುವವರು ಅಧ್ಯಕ್ಷರು/ರಿಜಿಸ್ಟ್ರಾರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, ಸಾಮರ್ಥ್ಯ ಸೌಧ, 2ನೇ ಮಹಡಿ, ಮಂಗಳೂರು ತಾಪಂ ಹಳೇ ಕಟ್ಟಡ, ಮಿನಿ ವಿಧಾನಸೌಧದ ಬಳಿ, ಮಂಗಳೂರು 575001 ಈ ವಿಳಾಸಕ್ಕೆ ಅಥವಾ ಅಕಾಡಮಿಯ ಇ-ಮೇಲ್ bearyacademy@yahoo.in ಅಥವಾ ಅಕಾಡಮಿಯ ವಾಟ್ಸ್‌ಆ್ಯಪ್ ಸಂಖ್ಯೆ 7483946578ಗೆ ಕಳುಹಿಸಬಹುದು ಎಂದು ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News