×
Ad

ಪತಿಯನ್ನು ಒತ್ತೆಯಾಳಾಗಿರಿಸಿ ಪತ್ನಿ, 12 ವರ್ಷದ ಪುತ್ರಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ದುಷ್ಕರ್ಮಿಗಳು

Update: 2020-08-03 23:17 IST

ಮಧ್ಯಪ್ರದೇಶ: ಪತಿಯನ್ನು ಒತ್ತೆಯಾಳಾಗಿರಿಸಿದ ದುಷ್ಕರ್ಮಿಗಳ ತಂಡವೊಂದು ಪತ್ನಿ ಮತ್ತು 12 ವರ್ಷದ ಪುತ್ರಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಮಧ್ಯಪ್ರದೇಶದ ಬುರ್ಹಾನ್ ಪುರದಲ್ಲಿ ನಡೆದಿದೆ.

ಈ ಕುಟುಂಬದ ಮನೆಗೆ ನುಗ್ಗಿದ್ದ 6 ಮಂದಿ ಸಶಸ್ತ್ರಧಾರಿಗಳ ತಂಡ ಮಹಿಳೆಯ ಪತಿಯನ್ನು ಒತ್ತೆಯಾಳಾಗಿ ಇರಿಸಿತ್ತು. ನಂತರ ಮಹಿಳೆ ಮತ್ತು ಆಕೆಯ 12 ವರ್ಷದ ಮಗಳನ್ನು ಅಪಹರಿಸಿ ಮೈದಾನಕ್ಕೆ ಎಳೆದೊಯ್ದಿತ್ತು. ನಂತರ ಅವರಿಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು ಎಂದು ಆರೋಪಿಸಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ಲಭಿಸಿದ ನಂತರ ಪೊಲೀಸರ ತಂಡವೊಂದು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News