ಅಝರ್ ಅಲಿ, ಬಾಬರ್ ಆಝಮ್‌ಗೆ ಟೆಸ್ಟ್ ರ‍್ಯಾಂಕಿಂಗ್ ‌ನಲ್ಲಿ ಪ್ರಗತಿ ಸಾಧಿಸುವ ಗುರಿ

Update: 2020-08-03 18:21 GMT

ದುಬೈ, ಆ.3: ಬುಧವಾರದಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್‌ನ್ನು ಎದುರಿಸಲಿದ್ದು, ಈ ಸರಣಿಯಲ್ಲಿ ಪಾಕ್ ನಾಯಕ ಅಝರ್ ಅಲಿ ಮತ್ತು ಉಪ ನಾಯಕ ಬಾಬರ್ ಆಝಮ್ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ‌ನಲ್ಲಿ ಪ್ರಗತಿ ಸಾಧಿಸುವ ಗುರಿ ಹೊಂದಿದ್ದಾರೆ.

ಇತ್ತೀಚಿನ ಶ್ರೇಯಾಂಕಗಳ ಪ್ರಕಾರ, ಈಗಿನ ಬ್ಯಾಟ್ಸ್ ಮನ್‌ಗಳಲ್ಲಿ 27ನೇ ಸ್ಥಾನದಲ್ಲಿರುವ ಅಝರ್ 2016ರ ಡಿಸೆಂಬರ್‌ನಲ್ಲಿ ವೃತ್ತಿಜೀವನದ ಅತ್ಯುತ್ತಮ ಆರನೇ ಸ್ಥಾನಕ್ಕೆ ಏರಿದ್ದರು. ಇದೀಗ ಫಾರ್ಮ್‌ನ್ನು ಮರಳಿ ಪಡೆಯುವ ಭರವಸೆಯಲ್ಲಿದ್ದರೆ, ಬಾಬರ್ ವೃತ್ತಿಜೀವನದ ಒಟ್ಟು 800 ರೇಟಿಂಗ್ ಪಾಯಿಂಟ್‌ಗಳಿಂದ ಪ್ರಗತಿ ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ.

ಫೆಬ್ರವರಿಯಲ್ಲಿ ವೃತ್ತಿಜೀವನದ ಉನ್ನತ ಐದನೇ ಸ್ಥಾನವನ್ನು ಪಡೆದ ಬಾಬರ್ ಪ್ರಸ್ತುತ ಆರನೇ ಸ್ಥಾನದಲ್ಲಿದ್ದಾರೆ.

 ಅಸಾದ್ ಶಫೀಕ್ (18ನೇ ಸ್ಥಾನ) ಮತ್ತು ಶಾನ್ ಮಸೂದ್ (33ನೇ ಸ್ಥಾನ) ಈ ಹಿಂದೆ ಉನ್ನತ ಶ್ರೇಯಾಂಕಗಳನ್ನು ಪಡೆದ ಪಾಕಿಸ್ತಾನದ ಇತರ ಬ್ಯಾಟ್ಸ್ ಮನ್‌ಗಳು. ಆದರೆ ಮತ್ತೆ ಮೇಲೇರಲು ತೀಕ್ಷ್ಣವಾದ ಬೌಲಿಂಗ್ ದಾಳಿಯನ್ನು ಎದುರಿಸಬೇಕಾಗುತ್ತದೆ.

ಬೌಲಿಂಗ್ ವಿಭಾಗದಲ್ಲಿ ಈ ಹಿಂದೆ ಕ್ರಮವಾಗಿ ಮೂರನೇ ಮತ್ತು ಪ್ರಥಮ ಸ್ಥಾನ ಪಡೆದಿದ್ದ ವೇಗಿ ಮುಹಮ್ಮದ್ ಅಬ್ಬಾಸ್ 13ನೇ ಮತ್ತು ಅನುಭವಿ ಲೆಗ್ ಸ್ಪಿನ್ನರ್ ಯಾಸಿರ್ ಷಾ 24ನೇ ಸ್ಥಾನ , ಎಡಗೈ ವೇಗದ ಬೌಲರ್ ಶಾಹೀನ್ ಅಫ್ರಿದಿ 32ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ ವೆಸ್ಟ್ ಇಂಡೀಸ್ ನಾಯಕ ಜೇಸನ್ ಹೋಲ್ಡರ್‌ರನ್ನು ಹಿಂದಿಕ್ಕಿ ಆಲ್‌ರೌಂಡರ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರು . ಈ ಹಿಂದೆ ಅಗ್ರ ಶ್ರೇಯಾಂಕಿತ ಸ್ಟುವರ್ಡ್ ಬ್ರಾಡ್ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದರು. ಇದೀಗ ಆಸ್ಟ್ರೇಲಿಯದ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ನೇತೃತ್ವ ವಹಿಸಿದ್ದಾರೆ.

ಸ್ಟೋಕ್ಸ್ ಇಂಗ್ಲೆಂಡ್‌ನ ಅಗ್ರ ಶ್ರೇಯಾಂಕದ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ. ನಾಯಕ ಜೋ ರೂಟ್ 9ನೇ ಮತ್ತು ಓಪನರ್ ರೋರಿ ಬರ್ನ್ಸ್ 17ನೇ ಸ್ಥಾನದಲ್ಲಿದ್ದಾರೆ.

ಡೊಮಿನಿಕ್ ಸಿಬ್ಲೇ (35ನೇ), ಜೋಸ್ ಬಟ್ಲರ್ (44 ನೇ ಸ್ಥಾನ) ಮತ್ತು ಒಲ್ಲಿ ಪೋಪ್ 46 ನೇ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ನಂತರ ಇಂಗ್ಲೆಂಡ್ ಮೂರನೇ ಸ್ಥಾನಕ್ಕೆ ಏರಿತು ಮತ್ತು ಆಸ್ಟ್ರೇಲಿಯವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಜಿಗಿಯುವ ಸಾಧ್ಯತೆಯಿದೆ. ಅದೇ ರೀತಿ ಪಾಕಿಸ್ತಾನವು ನ್ಯೂಝಿಲ್ಯಾಂಡ್‌ನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನ ತಲುಪುವ ಅವಕಾಶವನ್ನು ಹೊಂದಿದೆ.

ವೆಸ್ಟ್ ಇಂಡೀಸ್ ವಿರುದ್ಧ 2-1 ಅಂತರದಲ್ಲಿ ಸರಣಿ ಜಯ ಹೊರತುಪಡಿಸಿ, ಇಂಗ್ಲೆಂಡ್ ತಂಡ ಆಸ್ಟ್ರೇಲಿಯ ವಿರುದ್ಧ 2-2 ಅಂತರದಲ್ಲಿ ಐದು ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕು ಪಂದ್ಯಗಳ ಸರಣಿಯನ್ನು 3-1ರಿಂದ ಗೆದ್ದುಕೊಂಡಿತು.

ಪಾಕಿಸ್ತಾನವು ಆಸ್ಟ್ರೇಲಿಯ ವಿರುದ್ಧ ಎರಡು ಟೆಸ್ಟ್ ಸರಣಿಯ ಎರಡೂ ಪಂದ್ಯಗಳನ್ನು ಕಳೆದುಕೊಂಡಿತು. ಎರಡು ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾವನ್ನು 1-0 ಅಂತರದಿಂದ ಸೋಲಿಸಿತು. ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯವನ್ನು ಸ್ವದೇಶದಲ್ಲಿ ಗೆದ್ದುಕೊಂಡಿತು, ಮತ್ತೊಂದು ಟೆಸ್ಟ್ ಕೋವಿಡ್-19 ಕಾರಣದಿಂದ ಮುಂದೂಡಲ್ಪಟ್ಟಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News