ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಜಾನ್ ಹ್ಯೂಮ್ ಇನ್ನಿಲ್ಲ

Update: 2020-08-04 03:44 GMT

ಐರ್ಲೆಂಡ್, ಆ.4: ಉತ್ತರ ಐರ್ಲೆಂಡಿನ ಹಿಂಸಾಚಾರ ಕೊನೆಗೊಳಿಸುವಲ್ಲಿ ನಿರ್ಣಾಯಕ ಒಪ್ಪಂದ ಮಾಡಿಕೊಂಡ ದೂರದೃಷ್ಟಿಯ ರಾಜಕಾರಣಿ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಜಾನ್ ಹ್ಯೂಮ್ ಸೋಮವಾರ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಮಾಡರೇಟ್ ಸೋಶಿಯಲ್ ಡೆಮಾಕ್ರಟಿಕ್ ಆ್ಯಂಡ್ ಲೇಬರ್ ಪಾರ್ಟಿಯ ಕೆಥೋಲಿಕ್ ನಾಯಕರಾದ ಹ್ಯೂಮ್, 1998ರ ಉತ್ತರ ಐರ್ಲೆಂಡ್ ಶಾಂತಿ ಒಪ್ಪಂದದ ರೂವಾರಿಯಾಗಿದ್ದರು. ಪ್ರೊಟೆಸ್ಟೆಂಟ್ ನಾಯಕ ಅಲ್‌ಸ್ಟರ್ ಯೂನಿಯನಿಸ್ಟ್ ಪಾರ್ಟಿ ಮುಖಂಡ ಡೇವಿಡ್ ಟ್ರಿಂಬಲ್ ಜತೆ ಇವರು ಪ್ರಶಸ್ತಿ ಹಂಚಿಕೊಂಡಿದ್ದರು. ಸುಮಾರು 3500ಕ್ಕೂ ಅಧಿಕ ಮಂದಿಯನ್ನು ಬಲಿಪಡೆದ ಮೂರು ದಶಕಗಳ ಕಾಲ ನಡೆದ ಜನಾಂಗೀಯ ಹಿಂಸೆಯನ್ನು ಕೊನೆಗೊಳಿಸುವಲ್ಲಿ ಈ ಒಪ್ಪಂದ ಮಹತ್ವದ್ದಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News