ಯುಪಿಎಸ್‍ಸಿ ಪರೀಕ್ಷೆ: ಈ ಬಾರಿ 42 ಮುಸ್ಲಿಂ ಅಭ್ಯರ್ಥಿಗಳು ತೇರ್ಗಡೆ

Update: 2020-08-04 10:46 GMT

ಹೊಸದಿಲ್ಲಿ: ಕೇಂದ್ರ ಲೋಕಸೇವಾ ಆಯೋಗ 2019ರಲ್ಲಿ ನಡೆಸಿದ ಪರೀಕ್ಷೆಯಲ್ಲಿ 42 ಮುಸ್ಲಿಂ ಅಭ್ಯರ್ಥಿಗಳು ತೇರ್ಗಡೆಗೊಂಡಿದ್ದಾರೆ. ಕಳೆದ ವರ್ಷ ಒಟ್ಟು 28 ಮಂದಿ ತೇರ್ಗಡೆಗೊಂಡಿದ್ದರು.

ಪಿಎಸ್‍ಸಿ ರ್ಯಾಂಕ್ ಪಟ್ಟಿಯಲ್ಲಿ 45ನೇ ರ್ಯಾಂಕ್ ಗಳಿಸಿರುವ ಸಫ್ನಾ ನಝರುದ್ದೀನ್ ಅವರು ಟಾಪ್ 100ರಲ್ಲಿ ಸ್ಥಾನ ಪಡೆದ ಏಕೈಕ ಮುಸ್ಲಿಂ ಅಭ್ಯರ್ಥಿಯಾಗಿದ್ದಾರೆ.

ಮಂಗಳವಾರ ಬಿಡುಗಡೆಯಾದ ಫಲಿತಾಂಶದಲ್ಲಿ ಒಟ್ಟು 829 ಮಂದಿ ತೇರ್ಗಡೆಗೊಂಡಿದ್ದು, ಅವರ ಪೈಕಿ ಮುಸ್ಲಿಂ ಅಭ್ಯರ್ಥಿಗಳು ಶೇ 5ರಷ್ಟಿದ್ದಾರೆ. ಕಳೆದ ವರ್ಷ ತೇರ್ಗಡೆಯಾದ ಒಟ್ಟು 759 ಅಭ್ಯರ್ಥಿಗಳ ಪೈಕಿ ಶೇ 4 ಅಥವಾ 28 ಅಭ್ಯರ್ಥಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರು.

2016ನೇ ಬ್ಯಾಚ್ ಪರೀಕ್ಷೆಯಲ್ಲಿ ಮೊದಲ ಬಾರಿ ಗರಿಷ್ಠ 50 ಮುಸ್ಲಿಂ ಅಭ್ಯರ್ಥಿಗಳು ತೇರ್ಗಡೆಗೊಂಡಿದ್ದರಲ್ಲದೆ, ಟಾಪ್ 100ರ ಪಟ್ಟಿಯಲ್ಲಿ ಹತ್ತು ಮಂದಿ ಸಮುದಾಯಕ್ಕೆ ಸೇರಿದವರಾಗಿದ್ದರು. 2017ನೇ ಬ್ಯಾಚಿನ ಪರೀಕ್ಷೆಯಲ್ಲೂ 50 ಮುಸ್ಲಿಂ ಅಭ್ಯರ್ಥಿಗಳು ಯಶಸ್ಸು ಸಾಧಿಸಿದ್ದರು. ಇದಕ್ಕೂ ಮುಂಚೆ, 2012, 2013, 2014 ಹಾಗೂ 2015ರಲ್ಲಿ  ಕ್ರಮವಾಗಿ 30, 34, 38 ಹಾಗೂ 36 ಮುಸ್ಲಿಂ ಅಭ್ಯರ್ಥಿಗಳು ತೇರ್ಗಡೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News